ಹಳಿಯಾಳ : ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಯಾವುದೇ ಅಡೆತಡೆಗಳಿಲ್ಲದೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವಂತೆ ಪಟ್ಟಣದ ಶ್ರೀ.ಮಹಾಗಣಪತಿ ದೇವಸ್ಥಾನದಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಬುಧವಾರ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಅವರು ಇಸ್ರೋ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ಮಹಾಗಣಪತಿ ಒಳಿತು ಮಾಡಲಿ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಹಗಲಿರಲು ಶ್ರಮಿಸುತ್ತಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ಗಣಪತಿ ಕರಂಜೇಕರ, ಪುರಸಭೆಯ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಪ್ರಮುಖರಾದ ಶಿವಾಜಿ ಪಾಟೀಲ್, ಯಲ್ಲಪ್ಪ ಹೊನ್ನೋಜಿ, ಮೋಹನ ಗೌಡಾ, ಬಸಣ್ಣಾ ಕುರುಬಗಟ್ಟಿ, ಶಂಕರ ಗಳಗಿ, ನಾಗೇಂದ್ರ ಕುರುಬರ, ಆನಂದ ಕಂಚನಾಳಕರ, ಹನುಮಂತ ಚಲವಾದಿ, ಸಂಗೀತಾ ಜಾವಳೇಕರ, ಜಯಲಕ್ಷ್ಮೀ ಚವ್ಹಾಣ, ರತ್ನಮಾಲಾ ಮುಳೆ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವಂತೆ ಹಳಿಯಾಳದಲ್ಲಿ ಶ್ರೀ.ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ