ಪ್ರಯತ್ನ ಫೌಂಡೆಶನ್ ಬೆಂಗಳೂರು ವತಿಯಿಂದ ಗ್ರಾಮಿಣ ಶಾಲೆಗಳಿಗೆ ಕಲಿಕಾ ಸಾಮಗ್ರಿ ಹಾಗೂ ಶಾಲೆಗೆ ಅವಶ್ಯಕತೆ ಇರುವ ಉಪಕರಣ ಕೊಡುಗೆ

ಹೊನ್ನಾವರ: ತಾಲೂಕಿನ ಕುಗ್ರಾಮವಾದ ಕೊಡಾಣಿಯ ಬಾಳೆಮೆಟ್ಟು, ಮಾಗೋಡಿನ ಕೊಡ್ಲಗದ್ದೆ, ಸರಳಗಿಯ ಬಾವೂರ ಶಾಲೆಗಳಿಗೆ ಪ್ರಯತ್ನ ಫೌಂಡೆಶನ್ ಬೆಂಗಳೂರು ವತಿಯಿಂದ ಗ್ರಾಮಿಣ ಶಾಲೆಗಳಿಗೆ ಕಲಿಕಾ ಸಾಮಗ್ರಿ ಹಾಗೂ ಶಾಲೆಗೆ ಅವಶ್ಯಕತೆ ಇರುವ ಉಪಕರಣಗಳನ್ನು ನೀಡುವ ಮೂಲಕ ಶೈಕ್ಷಣಿಕ ಕೊಡುಗೆ ನೀಡಿದ್ದಾರೆ

ಕಳೆದ ಹದಿನೈದುವರ್ಷಗಳಿಂದ ಪ್ರಯತ್ನ ಫೌಂಡೆಶನ್ ಕುಗ್ರಾಮದ ಶಾಲೆಗಳಿಗೆ ನೆರವು ನೀಡುತ್ತಿದ್ದು ಅಂತಯೇ ಹೊನ್ನಾವರ ತಾಲೂಕಿನ ವ್ಯಾಪ್ತಿಯ ಶಾಲೆಗಳಿಗೆ ತಮ್ಮ ಸೇವೆ ವಿಸ್ತರಿಸಿದೆ. ಪ್ರಯತ್ನ ಫೌಂಡೆಶನ್ ಅಧ್ಯಕ್ಷರಾದ ದೇವರಾಜ್ ಅರಸ್ ಹಾಗೂ ಕಾರ್ಯಕರ್ತರಾದ ಪುರಂದರ ನಾಯ್ಕ, ಜನಾರ್ದನ ನಾಯ್ಕರವರು ಶಾಲೆಗೆ ಭೇಟಿ ನೀಡಿ ಸಾಮಗ್ರಿಗಳನ್ನ ವಿತರಿಸಿದರು.
ಶಿಕ್ಷಕ ಸೇವೆ ಅಮೂಲ್ಯವಾದದು.ಸೇವಾ ಮನೋಭಾವ ಇಲ್ಲದೆ ಶಿಕ್ಷಕ ಸೇವೆ ಸಲ್ಲಿಸಲಾಗದು.ಇಂದು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಲಭಿಸುತ್ತಿದೆ.ಯಾವುದೇ ಊರು ಪರಿಪೂರ್ಣತೆ ಸಾಧಿಸಿರುವುದಿಲ್ಲ. ಪರಿಪೂರ್ಣತೆ ಸಾಧಿಸಲು ನಮ್ಮ ಪ್ರಯತ್ನವು ಹೆಚ್ಚಿದಾಗಿರಬೇಕು ಎಂದು ಫೌಂಡೆಶನ್ ಅಧ್ಯಕ್ಷರಾದ ದೇವರಾಜ್ ಅರಸ್ ಈ ವೇಳೆ ಮಾತನಾಡಿದರು.
ಬೈಟ್:ದೇವರಾಜ್ ಅರಸ್

ಈ ಸಂದರ್ಭದಲ್ಲಿ ಎಲ್ಲಾ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು,ಸದಸ್ಯರುಗಳು,ಪಾಲಕ-ಪೊಷಕರು ಮತ್ತು ಶಾಲೆಯ ಅಧ್ಯಾಪಕರುಗಳು,ಶಿಕ್ಷಣ ಪ್ರೆಮಿಗಳು ಉಪಸ್ಥಿತರಿದ್ದು ಪ್ರಯತ್ನ ಫೌಂಡೇಶನ ಬೆಂಗಳೂರು ಇವರು ಇನ್ನೂ ಹೆಚ್ಚಿನ ಕೊಡುಗೆ ನಿಡುವಂತಾಗಲೆಂದು ಹಾರೈಸಿದರು.