ಯಲ್ಲಾಪುರ ತಾಲೂಕಿನ ಹುತ್ಕಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ ಅಭಿಯಾನ ಮತ್ತು ದಕ್ಷಿಣಾ ಮೂರ್ತಿ ಎಜುಕೇಶನ್ ಸೊಸೈಟಿಯವರು ಶಾಲಾ ಮಕ್ಕಳಿಗೆ ನೀಡಿರುವ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್,ಕಲಿಕಾ ಪರಿಕರ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಿ. ಆರ್ .ಸಿ. ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ,ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್, ಬಿ. ಆರ್. ಪಿ.ಗಳಾದ ಪ್ರಶಾಂತ್ ಪಟಗಾರ ಹಾಗು ಸಂತೋಷ್ ಜಿಗಳೂರು ಹಾಗೂ ಸಿ.ಆರ್.ಪಿ. ಕೆ.ಆರ್. ನಾಯ್ಕ ಉಪಸ್ಥಿತರಿದ್ದರು.
ದಕ್ಷಿಣಾ ಮೂರ್ತಿ ಎಜುಕೇಶನ್ ಸೊಸೈಟಿ ಸಂಚಾಲಕರಾದ ಶಾಲಿನಿ ರಾಯ್ಕರ್ ಹಾಗೂ ಶ್ವೇತಾ ನಾಗೇಶ ಕುಡ್ತರ್ಕರ್ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಎಸ್. ಡಿ. ಎಂ. ಸಿ. ಅಧ್ಯಕ್ಷ ನರಸಿಂಹ ಸಾತೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕಿ ಶಾಲಿನಿ ನಾಯ್ಕ್, ದೀಪಾ ಶೇಟ್, ವಿಜಯಲಕ್ಷ್ಮಿ ಭಟ್ ಹಾಗೂ ಎಸ್. ಡಿ.ಎಂ.ಸಿ.ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಸತೀಶ್ ಪಿ. ಶೆಟ್ಟಿ ಪ್ರಾಸ್ತಾವಿಕಗೈದು ಸ್ವಾಗತಿಸಿದರು.