ಜಿಲ್ಲಾ ಮಟ್ಟದ ಪ್ರೌಢಶಾಲೆ ಕ್ರೀಡಾಕೂಟದಲ್ಲಿ, ಕೋಟೆಬೈಲ್ ಸರಕಾರಿ ಪ್ರಾಢಶಾಲೆಯ ವಿದ್ಯಾರ್ಥಿನಿ ಚಂದನ ನಾಯ್ಕ ಉತ್ತಮ ಸಾಧನೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ, ಹೊನ್ನಾವರ ತಾಲೂಕಿನ ಕೋಟೆಬೈಲ್ ಸರಕಾರಿ ಪ್ರಾಢಶಾಲೆಯ ವಿದ್ಯಾರ್ಥಿನಿ ಚಂದನ ನಾಯ್ಕ ಉತ್ತಮ ಸಾಧನೆ ಮಾಡಿದ್ದಾಳೆ.

ಕುಮಟಾ ಗಿಬ್ ಹೈಸ್ಕೂಲಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ, ಕೋಟೆಬೈಲ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಂದನ ಎಂ. ನಾಯ್ಕ್ ಇವಳು, ಯೋಗಾಸನ ವಿಭಾಗದಲ್ಲಿ “ರಿದಮಿಕ್ ಯೋಗ”ವನ್ನು ಪ್ರದರ್ಶಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾಳೆ.ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯಲಿರುವ ವಿಭಾಗ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇವಳಿಗೆ ಶಾಲೆಯ ದೈಹಿಕ ಶಿಕ್ಷಕಿ ಪರ್ಪೆತಾ ರೊಡ್ರಿಗಿಸ್ ತರಬೇತಿ ನೀಡಿದ್ದರು.ಹೊಸಗದ್ದೆಯ ವಿದ್ಯಾ ಮತ್ತು ಮಾರುತಿ ನಾಯ್ಕ ದಂಪತಿಯ ಮಗಳಾದ ಚಂದನ, ಕ್ರೀಡಾ ವಿಭಾಗದಲ್ಲಿ ಯೋಗಾಸನ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಕೋಟೆಬೈಲ್ ಸರಕಾರಿ ಪ್ರೌಢ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಇವಳ ಕ್ರೀಡಾಕೂಟದಲ್ಲಿನ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ್, ಮುಖ್ಯಧ್ಯಾಪಕ ಸುರೇಶ ನಾಯ್ಕ್ ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಹಾಗೂ ಊರನಾಗರಿಕರು ಅಭಿನಂದಿಸಿ ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.