ಸೇವಾ ಸಹಕಾರ ಸಂಘದ ಸದಸ್ಯರ ಆಕ್ರೋಶದ ನಡುವೆಯೇ ನಡೆದ ವಾರ್ಷಿಕ ಸಭೆ

ಜೋಯಿಡಾದ ಕುಣಬಿ ಸಭಾಭವನದಲ್ಲಿ ನಡೆದ ಸೇವಾ ಸಹಕಾರಿ ಸಂಘದ ವಾರ್ಷಿಕ ಸಭೆ, ಸಾಕಷ್ಟು ಚರ್ಚೆ, ಹಲವು ಅನುಮಾನ ಮತ್ತು ಸದಸ್ಯರ ಆಕ್ರೋಶಕ್ಕೆ ಕಾರಣವಾಯ್ತು ಜೋಯಿಡಾದ ಕುಣಬಿ ಸಭಾಭವನದಲ್ಲಿ ಸೇವಾ ಸಹಕಾರಿ ಸಂಘದ ವಾರ್ಷಿಕ ಸಭೆ ರಮೇಶ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಆದ್ರೆ ಈ ಮಹಾಸ ಸಭೆ ಸಾಕಷ್ಟು ಚರ್ಚೆ, ಹಲವು ಅನುಮಾನ ಮತ್ತು ಸದಸ್ಯರ ಆಕ್ರೋಶಕ್ಕೆ ಕಾರಣವಾಯ್ತು ಕಳೆದ‌ 3ವರ್ಷಗಳಿಂದ ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಗೊತ್ತಿದ್ರು ಕೂಡ ಸಂಘದ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳಲು ತಡಮಾಡಿದ್ದೇಕೆ ಎಂದು ಸದಸ್ಯರು ನೇರ ಆರೋಪ ಮಾಡಿದ್ರು. ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಯುತ್ತಿರುವಾಗ ಸಂಘದ ಆಡಳಿತ ಮಂಡಳಿಯ ಗಮನಕ್ಮೆ ಬರದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ…

ಸಾಲವನ್ನೇ ಪಡೆಯದ ಉಳಿತಾಯದಾರರ ಮೇಲೆ ಸಾಲ ಕಟಬಾಕಿರುವ ಬಗ್ಗೆ ಪತ್ರ ಕಳುಹಿಸಲಾಗ್ತಿದೆ. ಬೆಳೆ ಸಾಲ‌ ನೀಡದೆ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪಿಗ್ಮಿ, ಉಳಿತಾಯ ಖಾತೆ ಹಾಗೂ ಡಿಪೋಸಿಟ್ ಮೂಲಕ ಹಣ ಇಟ್ಟವರು ಹಣ ಸಿಗದೇ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು ಇನ್ನೂ ಸಂಘದಲ್ಲಿ ಇಂತಹ ದೊಡ್ಡ ಗೋಲ್ಮಾಲ್ ನಡೆದ್ರೂ ಕೂಡ ಇದನ್ನು ನಿಯಂತ್ರಿಸಬೇಕಾದ ಸಹಕಾರ ಸಂಘಗಳ ಇಲಾಖೆ ಮೌನವಾಗಿರೋದು ವ್ಯಾಪಕ ಆಕ್ರೋಶ ಕಾರಣವಾಗಿದೆ. ಕೋಟ್ಯಾಂತರ ರೂಪಾಯಿ ಅವ್ಯವಹಾರದ ಬಗ್ಗೆ ಸಂಘದ ಮುಖ್ಯ ಕಾರ್ಯನಿರ್ವಾಹಕನ ವಿರುದ್ಧ ದೂರು ನೀಡಲಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ ಮತ್ತು ಅವ್ಯವಹಾರ ಆಗಬೇಕಾದ್ರೆ ಚೆಕ್‌ಗೆ ಅಧ್ಯಕ್ಷರ ಸಹಿ ಕೂಡ ಇರುವುದರಿಂದ ಅಧ್ಯಕ್ಷರು ಕೂಡ ಇದಕ್ಕೆ ಹೊಣೆಗಾರರಾಗಿದ್ದಾರೆ ಎಂದು ಸಂಘದ ಸದಸ್ಯರು ಆರೋಪಿಸಿದ್ರು..

ನಾವು ಜಮಾ ಮಾಡಿದ ಹಣವನ್ನು ವಾಪಸ್ ಕೊಡಿಸಿ, ನಮ್ಮ ಹಣವನ್ನು ನಮಗೆ ಮರಳಿ‌ ನೀಡುವ ಜವಾಬ್ದಾರಿಯನ್ನು ಸಂಘದ ಆಡಳಿತ ಮಂಡಳಿ ವಹಿಸಿಕೊಳ್ಳಬೇಕೆಂದು ಆಗ್ರಹಿಸಿದ್ರು. ಸಂಘಕ್ಕೆ ಬರಬೇಕಾದ ಹಣದ ವಸೂಲಾತಿ ಮತ್ತು ಸಂಘದಲ್ಲಿ ಜಮಾ ಮಾಡಿದ್ದ ಹಣವನ್ನು ಮರಳಿ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಸಂಘದ ಅಧ್ಯಕ್ಷ ರಮೇಶ್ ನಾಯ್ಕ ಹೇಳಿದ್ರು.. ಒಟ್ನಲ್ಲಿ ಸೇವಾ ಸಹಕಾರಿ ಸಂಘದ ವಾರ್ಷಿಕ ಸಭೆ ಸಾಕಷ್ಟು ಚರ್ಚೆ, ಆರೋಪಗಳ ನಡುವೆ ನಡೆದಿದ್ದು, ಯಾವುದೇ ಕ್ರಮವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಸಭೆಯು ಗೊಂದಲದ ಗೂಡಾಗಿ ಒಮ್ಮತದ ನಿರ್ಣಯಕ್ಕೆ ಬರದೆ ಮುಕ್ತಾಯಗೊಂಡಂತಾಗಿದೆ. ಈ ವೇಳೆ ಪ್ರಕಾಶ ವೆಳಿಪ್, ಆಡಳಿತ ಮಂಡಳಿ ಸದಸ್ಯರಾದ ಸದಾನಂದ‌ ದಬಗಾರ, ಸತೀಶ ನಾಯ್ಕ,ಇತರರು ಉಪಸ್ಥಿತರಿದ್ರು..