ರಾಘವೇಂದ್ರ ಭಾರತಿ ಸಂವೇದ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಸಪ್ತಾಹ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಕವಲಕ್ಕಿಯ ಭಾರತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ರಾಘವೇಂದ್ರ ಭಾರತಿ ಸಂವೇದ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹೊನ್ನಾವರ ತಾಲೂಕಿನ ಕವಲಕ್ಕಿಯ ಭಾರತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ರಾಘವೇಂದ್ರ ಭಾರತಿ ಸಂವೇದ ಸಂಸ್ಕೃತ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇದರ ಸಂಯುಕ್ತಾಶ್ರಯದಲ್ಲಿ ಸಂಸ್ಕೃತ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಡಾ.ನಾಗಪತಿ ಭಟ್‌, ಸಂಸ್ಕೃತವು ದೈವ ಭಾಷೆಯಾಗಿದ್ದು, ಇದು ವಿಶ್ವ ಮಾನ್ಯವಾಗಿದೆ. ಸಂಸ್ಕೃತದಲ್ಲಿ ಇತಿಹಾಸವಿದೆ, ವಿಜ್ಞಾನವಿದೆ, ಪುರುಷಾರ್ಥವಿದೆ, ಮೋಕ್ಷವಿದೆ, ಜ್ಞಾನವಿದೆ ಎಂದು ಹೇಳಿದ್ರು ಸಂಸ್ಕೃತವು ಶ್ರೀಮಂತ ಭಾಷೆಯಾಗಿದ್ದು ಜಗತ್ತಿನಲ್ಲಿರುವ ಸಕಲ ವಿಷಯಗಳನ್ನು ಇದು ಒಳಗೊಂಡಿದೆ. ಇದು ಎಲ್ಲಾ ಭಾಷೆಗಳಿಗೆ ಮಾತೃಭಾಷೆಯಾಗಿದ್ದು ಜ್ಞಾನ ಭಂಡಾರವಾಗಿದೆ ಎಂದು ಡಾ ಪತಂಜಲಿ ವೀಣಾಕಾರ್ ಹೇಳಿದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಿ ಜಿ ಹೆಗಡೆ ಗುಡ್ಗೆಯವರು ಮಾತನಾಡಿ ಸಂಸ್ಕೃತವನ್ನು ಅಧ್ಯಯನ ಮಾಡುವುದರ ಮೂಲಕ ಜ್ಞಾನವಂತರಾಗೋಣ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಂ ಎಸ್ ಹೆಗಡೆ, ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ , ಶಿಕ್ಷಕಿ ರೇಷ್ಮಾ ಜೋಗಳೆಕರ್ ,ಅಂಜನ ಶೆಟ್ಟಿ ಮೊದಲಾವರು ಉಪಸ್ಥಿತರಿದ್ರು…