ಬೆಂಗಳೂರು – ಮಂಗಳೂರು ರೈಲು ಮುರುಡೇಶ್ವರ ತನಕ ವಿಸ್ತರಣೆ

ಮುರ್ಡೇಶ್ವರ ಗಣೇಶ ಚತುರ್ಥಿ ಹಬ್ಬದ ಕ್ಷಣಗಣನೆ ಬೆನ್ನಲ್ಲೇ ರೈಲ್ವೆ ಇಲಾಖೆ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ತೆರಳುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ ದೇಶದ ಪ್ರಮುಖ ಪ್ರವಾಸಿ ತಾಣವಾದ ಮುರ್ಡೇಶ್ವರದಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ನೂತನ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಾಯಿತು. ಈ ಹಿಂದೆ ಬೆಂಗಳೂರಿನ ಸರ್ ಎಂ.ವಿ ಟರ್ಮಿನಲ್‌ನಿಂದ ಹೊರಡುವ ರೈಲು, ಮೈಸೂರು ಮೂಲಕ ಮಂಗಳೂರು ಸೆಂಟ್ರಲ್ ಟರ್ಮಿನಲ್‌ಗೆ ಕೊನೆಯಾಗುತ್ತಿತ್ತು. ಆದ್ರೀಗ ಕೊಂಕಣ ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಈ ರೈಲಿನ ಸಂಚಾರವನ್ನು ಮುರ್ಡೇಶ್ವರಕ್ಕೆ ವಿಸ್ತರಿಸಲಾಗಿದ್ದು ವಾರದಲ್ಲಿ ಏಳು ದಿನವೂ ಆಗಮಿಸಲಿದೆ… ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರಿಗೆ ಹೊಗುತ್ತಿದ್ದಎಕ್ಸ್ ಪ್ರೆಸ್ ರೈಲು ಸಂಖ್ಯೆ 16586 ಮುರ್ಡೇಶ್ವರದಿಂದ ತನ್ನ ಪ್ರಯಾಣವನ್ನು ಆರಂಭಿಸಿದೆ. ನಿಗದಿತ ವೇಳಾಪಟ್ಟಿಯಂತೆ ರೈಲು ಬೆಂಗಳೂರಿನ ಸರ್ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 8:15 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಮುರ್ಡೇಶ್ವರ ತಲುಪುತ್ತದೆ..

ಅದೇ ರೀತಿ ಎಕ್ಸ್ಪ್ರೆಸ್ ರೈಲು ಸಂಖ್ಯೆ 16586 ಮುರ್ಡೇಶ್ವರದಿಂದ ಮಧ್ಯಾಹ್ನ2:10 ಕ್ಕೆ ಹೊರಟು ಭಟ್ಕಳ, ಕುಂದಾಪುರ, ಉಡುಪಿ, ಸುರತ್ಕಲ್ ಬಿಟ್ಟು 6 ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಸಂಜೆ 6:35 ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 3:15 ಕ್ಕೆ ಮೈಸೂರಿಗೆ ಆಗಮಿಸಿ ಬೆಳಗ್ಗೆ 7:15 ಕ್ಕೆ ಬೆಂಗಳೂರು ತಲುಪಲಿದೆ ಈ ರೈಲು ಮೊದಲಿನಂತೆ ಪಡೀಲ್ ಮತ್ತು ಮೈಸೂರಿನಲ್ಲಿ ನಿಲುಗಡೆ ಮಾಡುವುದನ್ನು ಮುಂದುವರಿಸುತ್ತಿದ್ದು, ಹೆಚ್ಚುವರಿಯಾಗಿ ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಮತ್ತು ಭಟ್ಕಳದಲ್ಲಿ ನಿಲುಗಡೆ ನೀಡಲಾಗಿದೆ ಎಂದೂ ತಿಳಿಸಲಾಗಿದೆ.
ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ನೂತನ ರೈಲಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಲಾಯಿತು. ಉದ್ಘಾಟನಾ ಸಂದರ್ಭದಲ್ಲಿ ಕುಂದಾಪುರ ರೈಲ್ವೇ ಹಿತರಕ್ಷಣಾ ಸಲಹಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಗೌತಮ್, ವಿವೇಕ ನಾಯ್ಕ್, ಉತ್ತರ ಕನ್ನಡ ರೈಲ್ವೆ ಸಮಿತಿ ಅಧ್ಯಕ್ಷ ರಾಜು ಗಾಂವ್ಕರ್, ಸದಸ್ಯ ಜಾರ್ಜ್ ಫರ್ನಾಂಡೀಸ್, ಎಸ್.ಎಸ್. ಕಾಮತ್, ಶಂಕರ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು…