ದಾಂಡೇಲಿಯ ತಾಲ್ಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ

ದಾಂಡೇಲಿ : ತಾಲ್ಲೂಕು ಆಡಳಿತ ಮತ್ತು ನಗರ ಆಡಳಿತದ ಸಂಯುಕ್ತ ಆಶ್ರಯದಡಿ ದಾಂಡೇಲಿ ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಇಂದು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ವಿಶ್ವಕರ್ಮರ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿ ಗೌರವವನ್ನು ಸಲ್ಲಿಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಂಗೂರೂನಗರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ: ಎಸ್.ಎಸ್.ದೊಡ್ಡಮನಿ ಅವರು ಭಗವಾನ್ ವಿಶ್ವಕರ್ಮನನ್ನು ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ, ಕುಶಲಕರ್ಮಿ ಮತ್ತು ಇಂಜಿನಿಯರ್ ಎಂದು ಪರಿಗಣಿಸಲಾಗಿದೆ. ಈ ದಿನದಂದು ವಿಶ್ವಕರ್ಮ ದೇವರನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಶ್ರಮ ಸಂಸ್ಕೃತಿಯ ಬದುಕಿಗೆ ವಿಶ್ವಕರ್ಮರ ತತ್ವ ಸದಾ ಅನುಕರಣೆಯ ಮತ್ತು ಅಭಿನಂದನೆಯ ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ನಗರಸಭೆಯ ಅಧಿಕಾರಿ ಮೈಕಲ್ ಫರ್ನಾಂಡಿಸ್, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು, ನಾಡಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು