ಪೋಟೋಗ್ರಾಪರ್ಸ ಮತ್ತು ವಿಡಿಯೋಗ್ರಾಪರ್ಸ ಅಸೋಸಿಯೇಶನ್ ಸಂಘಟನೆ ಮಾದರಿ ಸಂಘಟನೆಯಾಗಿದೆ-ಜಿ.ಜಿ.ಶಂಕರ

ಹೊನ್ನಾವರ: “ಹೊನ್ನಾವರ ತಾಲೂಕ ಪೋಟೋಗ್ರಾಪರ್ಸ ಮತ್ತು ವಿಡಿಯೋಗ್ರಾಪರ್ಸ ಅಸೋಸಿಯೇಶನ್ ಸಂಘಟನೆ ಮಾದರಿ ಸಂಘಟನೆಯಾಗಿದೆ”ಎಂದು ಸೇಪ್ ಸ್ಟಾರ್ ಸಮೂಹ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಶಂಕರ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹೊನ್ನಾವರ ತಾಲೂಕ ಪೋಟೋಗ್ರಾಪರ್ಸ ಮತ್ತು ವಿಡಿಯೋಗ್ರಾಪರ್ಸ ಅಸೋಸಿಯೇಶನ್ ಆಯೋಜಿಸಿದ 17 ನೇ ವರ್ಷದ ವಾರ್ಷಿಕೊತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೈಗೆಟಕುವ ದರದಲ್ಲಿ ಸಿಗುತ್ತಿರುವ ಮೊಬೈಲ್ ಹಾಗೂ ಇನ್ನಿತರ ಫೋಟೋಗ್ರಫಿ ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಛಾಯಾಗ್ರಾಹಕರಿಗೆ ಸಾಕಷ್ಟು ಅಡೆತಡೆಯಾಗಿ ಹಿನ್ನಡೆಯಾಗುತ್ತಿದೆ.ಸತ್ವ ಪರೀಕ್ಷೆ ಎದುರಿಸುವ ಜೊತೆಗೆ ಅವಲಂಭಿಸಿಕೊಂಡಿರುವ ಉದ್ಯೋಗ ನಡೆಸಬೇಕಾದ ಸವಾಲು ಎದುರಾಗಿದೆ. ವೃತ್ತಿ ನಿರತ ಛಾಯಾಗ್ರಹಕರ ಕೊರತೆ ಇದೆ. ಒರ್ವ ಛಾಯಗ್ರಾಹಕ ತೆಗೆದ ಛಾಯಚಿತ್ರ ಮುಂದಿನ ತಲೆಮಾರಿಗೆ ಒಂದು ದಾಖಲೆಯಾಗಲಿದೆ, ಅಂತಹ ಮಹತ್ಕಾರ್ಯ ಛಾಯಗ್ರಾಹಕರು ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಮುಂದಿನ ದಿನದಲ್ಲಿ ಈ ವೃತ್ತಿಯಲ್ಲಿ ಇರುವವರಿಗೆ ಸಂಕಷ್ಟಕ್ಕೆ ನೆರವಾಗಲು ಪ್ರಾಧಿಕಾರ ರಚನೆ ಮಾಡಬೇಕು. ಮುಂದಿನ ದಿನದಲ್ಲಿ ಸೇಪ್ ಸ್ಟಾರ ಸಂಸ್ಥೆಯ ವತಿಯಿಂದ ಜಿಲ್ಲೆಯ ವೃತ್ತಿಭಾದಂವರಿಗೆ ಉಚಿತ ಅಪಘಾತ ವಿಮೆ ಸೌಲಭ್ಯ ಮಾಡಲು ಉತ್ಸುಕತೆ ಹೊಂದಿರುದಾಗಿ ಭರವಸೆ ನೀಡಿದರು. ತಾಲೂಕಿನ ಪೊಟೋಗ್ರಾಪರ್ ಷಣ್ಮುಖ ಭಟ್, ಗಣೇಶ ಶೆಟ್ಟಿ, ಸುಭಾಶ ನಾಯ್ಕ, ವಿಠ್ಠಲ್ ಭಂಡಾರಿ, ರಮೇಶ ಮೇಸ್ತ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ ವಿಭಾಗದಲ್ಲಿ ಸಾಧನೆ ಮಾಡಿದ ಯೂನಿಯನ್ ಸದಸ್ಯರ ಮಕ್ಕಳನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಯಧುವೀರ ಕೊ.ಆಪರೇಟಿವ್ ಅಧ್ಯಕ್ಷ ಶ್ರೀಕಾಂತ ನಾಯ್ಕ ಮಾತನಾಡಿ ನಮ್ಮ ಹೊನ್ನಾವರ ಪ್ರವಾಸೊದ್ಯಮ ರಂಗದಲ್ಲಿ ಬೆಳೆಯಲು ಸರ್ಕಾರದಿಂದ ನಿರಿಕ್ಷೀತ ಪ್ರಮಾಣದಲ್ಲಿ ಪೊತ್ಸಾಹ ದೊರೆಯುತ್ತಿಲ್ಲ. ಪ್ರವಾಸೊದ್ಯಮ ಅಭಿವೃದ್ದಿ ಹೊಂದಿದರೆ, ಈ ಭಾಗದ ಪೊಟೊಗ್ರಾಫರ್ ವೃತ್ತಿಯವರಿಗೆ ಆದಾಯ ಬರಲಿದೆ ಅಂತಹ ಕಾರ್ಯಕ್ಕೆ ಜನಪ್ರತಿನಿಧಿಗಳು ಅಧಿಕಾರಿಗಳು ಮುಂದಾಗಬೇಕಿದೆ ಎಂದರು.
ಪತ್ರಕರ್ತ ಸಂಘದ ಅಧ್ಯಕ್ಷ ಸತೀಶ ತಾಂಡೇಲ್ ಮಾತನಾಡಿ ಬದುಕಿನ ನೆನಪಿನ ಬುತ್ತಿಯನ್ನು ಕಟ್ಟಿಕೊಡುವವರು ಪೊಟೋಗ್ರಾಫರ್. ಸಮಾಜಕ್ಕೆ ಮತ್ತು ಇವರಿಗೆ ಅವಿನಾಭಾವ ಸಂಭದವಿದೆ. ಮನುಷ್ಯನ ಜನನ, ಮದುವೆ, ಮರಣ ಈ ಎಲ್ಲಾ ಕಾರ್ಯಕ್ರಮಕ್ಕೂ ಈ ವೃತ್ತಿಯವರು ಅವಶ್ಯಕತೆ ಇದೆ. ಪ್ರತಿಭಾನ್ವಿತ ಪೊಟೋಗ್ರಾಫರ್ ತವರೂರು ಹೊನ್ನಾವರವಾಗಿದೆ. ಕಾಂತಾರ ಸಿನಿಮಾದಲ್ಲಿ ಸ್ಟಿಲ್ ಫೋಟೊಗ್ರಾಫಿ ಮಾಡಿದವರು ಹೊನ್ನಾವರದ ಜನಪ್ರಿಯ ಪೊಟೋಗ್ರಾಫರ್ ಆರ್.ಕೆ ಮೇಸ್ತ ಅವರ ಶಿಷ್ಯರಾಗಿರುವುದು ಹೆಮ್ಮೆಯ ವಿಷಯ. ಸರ್ಕಾರ ಇವರಿಗೆ ಅನೇಕ ಸೌಲಭ್ಯ ಒದಗಿಸಿದರೆ ಇನ್ನಷ್ಟು ಪ್ರತಿಭಾವಂತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಧ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಸಂಘದ ಅಧ್ಯಕ್ಷ ಸುರೇಶ ಹೊನ್ನಾವರ ಮಾತನಾಡಿ ದೀಪದ ಬುಡಕ್ಕೆ ಕತ್ತಲು ಎನ್ನುವಂತೆ ಅನೇಕ ಸವಾಲಿನ ಮಧ್ಯೆ ವೃತ್ತಿ ನಿಭಾಹಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಅನೇಕ ಏಳುಬೀಳುಗಳ ಮಧ್ಯೆ ಸದಸ್ಯರ ಆರ್ಥಿಕ ಸಂಕಷ್ಟಕ್ಕೆ ನೆರವಾಗುದಲ್ಲದೇ, ಸದಸ್ಯರ ಮಕ್ಕಳ ಪ್ರತಿಭೆಗೂ ಪೊತ್ಸಾಹ ನೀಡುತ್ತಾ ಬಂದಿರುವುದಾಗಿ ಸಂಘದ ಕಾರ್ಯ ವೈಖರಿಯ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆ.ಪಿ.ಎ ಜಂಟಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ತಾಲೂಕ ಸಂಘದ ಉಪಾಧ್ಯಕ್ಷರಾದ ಸತೀಶ ನಾಯ್ಕ,ರಾಘವ ಮೇಸ್ತ, ಸೇರಿದಂತೆ ತಾಲೂಕಿನ ಪೋಟೋ ಹಾಗೂ ವಿಡಿಯೋಗ್ರಾಪರ್ ಉಪಸ್ಥಿತರಿದ್ದರು.‌ ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸತ್ಯನಾರಾಯಣ ಪೂಜೆ, ಗಣಹೋಮ ಸೇರಿದಂತೆ ಮಹಾಗಣಪತಿ ದೇವರಿಗೆ ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದ ನಂತರ ಮನೊರಂಜನಾ ಕಾರ್ಯಕ್ರಮ ನೇರವೇರಿತು.