ಯಲ್ಲಾಪುರ:ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ

ಯಲ್ಲಾಪುರ:ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಬುಧವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಪುರುಷಸೂಕ್ತ, ವಿಷ್ಣುಸಹಸ್ರನಾಮ‌ ಪಾರಾಯಣ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಉತ್ಸವದ ಪ್ರಯುಕ್ತ ಸ್ಥಳೀಯ ಕಲಾವಿದರಿಂದ ಭೀಷ್ಮಪರ್ವ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರ, ನಾಗೇಂದ್ರ ಶೇಡಿಜಡ್ಡಿ, ನಾರಾಯಣ ಭಾಗ್ವತ ದೇವರಗದ್ದೆ, ಮಂಜುನಾಥ ಭಟ್ಟ ದೇವದಮನೆ, ಮದ್ದಲೆವಾದಕರಾಗಿ ಸುಬ್ರಾಯ ಗಾಣಗದ್ದೆ, ಚಂಡೆವಾದಕರಾಗಿ ನಾಗರಾಜ ಭಟ್ಟ ಕವಡಿಕೆರೆ ಭಾಗವಹಿಸಿದ್ದರು.
ಭೀಷ್ಮನಾಗಿ ಡಾ.ಮಹೇಶ ಭಟ್ಟ ಇಡಗುಂದಿ, ಕೃಷ್ಣನಾಗಿ ಡಾ.ಶಿವರಾಮ ಭಾಗ್ವತ ಮಣ್ಕುಳಿ, ಅರ್ಜುನ ಹಾಗೂ ಕರ್ಣನಾಗಿ ರವೀಂದ್ರ ಭಟ್ಟ ವೈದಿಕರಮನೆ, ಕೌರವನಾಗಿ ಶ್ರೀಧರ ಅಣಲಗಾರ, ದ್ರೋಣನಾಗಿ ಮಹಾಬಲೇಶ್ವರ ಭಟ್ಟ, ಧರ್ಮರಾಯನಾಗಿ ಮಂಜುನಾಥ ಭಟ್ಟ ಪಾತ್ರ ಚಿತ್ರಣ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ಟ ಬಿದ್ರೆಪಾಲ ಕಲಾವಿದರನ್ನು ಗೌರವಿಸಿದರು