ಯಲ್ಲಾಪುರ: ತಾಲೂಕಿನ ಕಳಚೆಯ ಸಹ್ಯಾದ್ರಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಾರಂಭವಾಗಿ ೫೯ ಯಶಸ್ವಿಯಾಗಿ ಪೂರೈಸಿದ್ದು,ಸೆ.೧೫ ರಂದು ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಕಳಚೆ ಹೇಳಿದರು.
ಅವರು ಸಂಘದ ಬೆಳವಣಿಗೆ ಕುರಿತು ಗುರುವಾರ ಯಲ್ಲಾಪುರದ ಶಾಖೆಯಲ್ಲಿ ಮಾಹಿತಿ ನೀಡಿ,ಕಳೆದ ಆರ್ಥಿಕ ವರ್ಷದಲ್ಲಿ ೪೮.೧೧ ಲಕ್ಷ ನಿವ್ವಳ ಲಾಭ ಗಳಿಸಿದೆ. ಅತಿವೃಷ್ಟಿ, ಭೂ ಕುಸಿತದಿಂದ ಸಂಕಷ್ಟದಲ್ಲಿದ್ದರೂ
ಸಾಲ ವಸೂಲಾತಿ ಉತ್ತಮವಾಗಿದೆ. ಸಂಘವು ೫೬ ಕೋಟಿ ಠೇವಣಿ ಹೊಂದಿದೆ. ಸಂಘ ಹೆಬ್ಬಾರಕುಂಬ್ರಿ ಹಾಗೂ ಯಲ್ಲಾಪುರದಲ್ಲಿ ಎರಡು ಕಡೆ ಶಾಖೆಗಳನ್ನು ಹೊಂದಿದೆ. ಕಳೆದ
೨೨ ವರ್ಷಗಳಿಂದ ಯಲ್ಲಾಪುರ ಶಾಖೆ ಕಳಚೆ ಬ್ಯಾಂಕ್ ಎಂಬ ಬ್ರಾಂಡ್ ನಿಂದ ಗುರುತಿಸಿಕೊಂಡಿದೆ. ಕಳೆದವರ್ಷ ಅಡಿಕೆ ದಲಾಲಿ ಅಂಗಡಿ ಪ್ರಾರಂಭಿಸಿದ್ದು, ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆದಿದ್ದು ಉತ್ತಮ ಬೆಳವಣಿಗೆಯಾಗಿದೆ. ಸಂಘ ಅಡಿಕೆ ಸುಲಿಯುವ ಯಂತ್ರ ಸದಸ್ಯರಿಗೆ ಬಾಡಿಗೆ ಕೊಡುತ್ತಿದೆ. ಕೊಬ್ಬರಿ ಎಣ್ಣೆ ಮಿಲ್ ಸಹ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ,ನಿರ್ದೇಶಕರಾದ ರಾಮಕೃಷ್ಣ ಹೆಗಡೆ,ಶ್ರೀಕಾಂತ ಹೆಬ್ಬಾರ್ ಹಾಗೂ ಎಲ್ಲ ನಿರ್ದೇಶಕರು ಸಿಬ್ಬಂದಿ ಇದ್ದರು.