ಹೊನ್ನಾವರ: ಫೌಂಡೇಶನ್ ಬೆಂಗಳೂರು ವತಿಯಿಂದ ಕಲಿಕಾ ಸಾಮಗ್ರಿ ಮತ್ತು ಶಾಲೆಗೆ ಅವಶ್ಯವಿರುವ ಕಲಿಕಾ ಸಾಮಗ್ರಿ ವಿತರಣೆ

ಹೊನ್ನಾವರ : ತಾಲ್ಲೂಕಿನ ಅತ್ಯಂತ ಕುಗ್ರಾಮಗಳಲ್ಲಿ ಒಂದಾದ ಬಾವೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಯತ್ನ ಫೌಂಡೇಶನ್ ಬೆಂಗಳೂರು ವತಿಯಿಂದ ಕಲಿಕಾ ಸಾಮಗ್ರಿ ಮತ್ತು ಶಾಲೆಗೆ ಅವಶ್ಯವಿರುವ ಕಲಿಕಾ ಸಾಮಗ್ರಿಗಳನ್ನು ನೀಡಿದೆ.

ಫೌಂಡೇಶನ್ ನ ಕಾರ್ಯಕರ್ತರಾದ ಪುರಂದರ ಜಿ ನಾಯ್ಕ, ಜನಾರ್ದನ ನಾಯ್ಕ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಈ ವೇಳೆ ಪುರಂದರ ಜಿ ನಾಯ್ಕ ಅವರು ಮಾತನಾಡಿ, ಶಾಲೆಗೆ ಮತ್ತು ಶಿಕ್ಷಣಕ್ಕಾಗಿ ತಮ್ಮ ಸೇವಾ,ಸಹಕಾರ ನೀಡಬೇಕೆಂದು ಪ್ರಯತ್ನ ಫೌಂಡೇಶನ್ ಕಳೆದ 10-12 ವರ್ಷಗಳಿಂದ ಶ್ರಮಿಸುತ್ತಿದೆ.ಬೆಂಗಳೂರು ಭಾಗದಲ್ಲಿನ ಹಲವಾರು ಶಾಲೆಗಳಿಗೆ ನೆರವು ನೀಡಿತ್ತು.ಇದೀಗ ಗ್ರಾಮೀಣ ಭಾಗದ ಶಾಲೆಗಳಿಗೆ ತಮ್ಮ ಕೊಡುಗೆ ನೀಡಬೇಕೆಂದು ನಿರ್ಧರಿಸಿ ಮುಖ್ಯವಾಗಿ ಕುಗ್ರಾಮಗಳಲ್ಲಿನ ಶಾಲೆಗಳನ್ನು ಹೆಚ್ಚಿನದಾಗಿ ಪರಿಗಣಿಸಿ ನೆರವು ನೀಡಿದೆ ಎಂದು ಪ್ರಯತ್ನ ಫೌಂಡೇಶನ್ ಬೆಂಗಳೂರು ಇದರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು.
ಬೈಟ್:ಪುರಂದರ ನಾಯ್ಕ

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮಸ್ಥರು ಮುಂತಾದವರು ಇದ್ದರು.