ಲೋಕಸಭಾ ಚುನಾವಣೆಯ ಹಿನ್ನಲೆ : ದಾಂಡೇಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸಭೆ

ದಾಂಡೇಲಿ : ಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಕುರಿತಂತೆ ದಾಂಡೇಲಿ ನಗರದಲ್ಲಿರುವ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ ಅವರು ಪಕ್ಷ ಸಂಘಟನೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕೈಗೊಳ್ಳಬೇಕಾದ ಕ್ರಮಗಳು, ಕೇಂದ್ರ ಸರಕಾರದ ಜನಪರ ಯೋಜನೆಗಳ ಬಗ್ಗೆ ಜನಮಾನಸಕ್ಕೆ ತಿಳಿಸುವುದು ಸೇರಿದಂತೆ, ಹೊಸ ವಿಸ್ತಾರಕರ ಪರಿಚಯ ಹಾಗೂ ಲೋಕಸಭೆ ಚುನಾವಣೆ ತಯಾರಿಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ‌ ಬಗ್ಗೆ ಮಾಹಿತಿ‌ ನೀಡಿದರು.

ಮಾಜಿ ಶಾಸಕರಾದ ಸುನಿಲ್ ಹೆಗಡೆ ಅವರು ಭಾಗವಹಿಸಿ ಮಾತನಾಡಿ ಜಗತ್ತೇ ಹೆಮ್ಮೆ ಪಡುವಂತಹ ಆಡಳಿತವನ್ನು ನೀಡಿದ ಹೆಗ್ಗಳಿಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಇದೆ.‌ಬಿಜೆಪಿ ಸರಕಾರದ ಸಾಧನೆ ಬರಲಿರುಬ ಲೋಕ ಸಭಾ ಚುನಾವಣೆಯ ಗೆಲುವಿನಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಲಿದೆ. ದೇಶದ ಸುಭದ್ರತೆ ದೇಶದ ಸದೃಢತೆ ಮತ್ತು ದೇಶದ ಪ್ರಗತಿಯ ನಿಟ್ಟಿನಲ್ಲಿ ಕೇಂದ್ರದಲ್ಲಿ ಬಿಜೆಪಿ ಅನಿವಾರ್ಯ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಲೋಕಸಭಾ ಕ್ಷೇತ್ರದ ನೂತನ ಜಿಲ್ಲಾ ವಿಸ್ತಾರಕ ಪುರಂದರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಕ್ಷದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಕಾಂತ ಕ್ಷೀರಸಾಗರ, ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಕಲಶೆಟ್ಟಿ   ಪ್ರಧಾನ  ಕಾರ್ಯದರ್ಶಿಗಳಾದ  ಗುರು ಮಠಪತಿ ಮತ್ತು ಗಿರೀಶ್ ಟೊಸೂರ, ಪ್ರಮುಖರಾದ ರೋಶನ್ ನೇತ್ರಾವಳಿ, ಎಮ್ ಸಿ ಹೆಗಡೆ, ಅಶೋಕ ಪಾಟೀಲ ಎಸ್ ಎನ್ ಪಾಟೀಲ, ಸಂಜೀವ್ ಜಾದವ್  ‌‌‌‌ಮತ್ತು    ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಮೋರ್ಚಾ ಮತ್ತು ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಮೊದಲಾದವರು ಉಪಸ್ಥಿತರಿದ್ದರು.