ಭಟ್ಕಳ ದಲ್ಲಿನಡೆದ ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿ ಪೊಲೀಸರು ಮಧ್ಯಸ್ಥಿಕೆ ವಹಿಸಿದ ಘಟನೆ ನಡೆದಿದೆ….
ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ತಾಲೂಕಾ ಪಂಚಾಯತ ಸಭಾಗ್ರಹದಲ್ಲಿ ನಡೀತು. ಈ ಸಭೆಯಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಮ್. ಎಮ್. ಬಿಳಗಿ ಅವರ ನೇಮಕದ ಬಳಿಕ, ಸಿಬ್ಬಂದಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಈ ವಿಚಾರವಾಗಿ ಸಚಿವರು ನಿರ್ದೇಶಕರಲ್ಲಿ ಪ್ರಶ್ನಿಸಿದಕ್ಕೆ ನಾನು ಸರ್ಕಾರದ ಮಾರ್ಗಸೂಚಿ ಯಂತೆ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಅಪಪ್ರಚಾರ ಮಾಡಿದ್ದಾರೆ. ನನ್ನ ಶಿಸ್ತು ರೀತಿ ಕೆಲಸ ಉಳಿದ ಸಿಬ್ಬಂದಿಗಳಿಗೆ ಸಮಸ್ಯೆ ಆಗಿದ್ದಕ್ಕೆ ಅವರು ವರ್ಗಾವಣೆ ಮಾಡಿಸಿಕೊಂಡು ಹೋಗಿರಬಹುದು ಎಂಬ ಉಡಾಪೆಯ ಉತ್ತರ ನೀಡಿದ್ದಾರೆ. ಇದಕ್ಕೆ ಸಚಿವ ಮಂಕಾಳ ವೈದ್ಯ ಅವರು ನಿಮ್ಮ ಮೇಲೆ ಕಚೇರಿಯಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ನೀವು ಕಿರುಕುಳ ನೀಡುತ್ತಿರುವ ವಿಚಾರದಲ್ಲಿ ಪತ್ರ ಬರೆದು ನನಗೆ ನೀಡಿದ್ದು ಪೋಲೀಸಗೆ ದೂರು ಹೋಗುವ ಬಗ್ಗೆ ಹೇಳಿದ್ದಾರೆ. ಹಾಗೂ ನಿಮ್ಮ ವಿರುದ್ದ ಎಲ್ಲಾ ಸಾಕ್ಷಿ ನನ್ನಬಳಿ ಇದೆ ಇದನ್ನು ಸಭೆಯಲ್ಲಿ ಬಯಲು ಮಾಡಬೇಕಾಗುತ್ತದೆ ಎಂದು ಗರಂ ಆದ್ರು… ನಂತರ ಸಚಿವ ಮಂಕಾಳ ಅವರ ಜೊತೆಗೆ ನಿರ್ದೇಶಕ ಅಧಿಕಾರಿ ಮಾತಿಗಿಳಿದಿದರು. ಇದೇ ವೇಳೆ ದೇಶದಲ್ಲಿ ರಾಮನನ್ನು ಗಾಂಧಿಯನ್ನು ಜನರು ಬಿಟ್ಟಿಲ್ಲ ಎಂಬ ಮಾತು ಕೇಳಿದ ಇಲಾಖೆ ನಿರ್ದೇಶಕರ ಮಾತಿಗೆ ಸಚಿವ ಮಂಕಾಳ ವೈದ್ಯ ಏಕವಚನದಲ್ಲಿ ಸಭೆಯಿಂದ ಹೊರಗೆ ನಡೆ ಎಂದು ಎಚ್ಚರಿಕೆ ನೀಡಿದ್ರು. ಈ ಹಿಂದೆ ನಿಮ್ಮನ್ನು ಕೆಲಸದಿಂದ ವಜಾ ಮಾಡಿದ ಬಗ್ಗೆ ಉತ್ತರಿಸಿ ಹಾಗೂ ನಿಮ್ಮ ಬಗ್ಗೆ ಎಲ್ಲಾ ವರದಿ ನನ್ನ ಬಳಿ ಇದೆ ಎಂದು ನಿರ್ದೇಶಕರನ್ನು ಹೊರ ಹಾಕಲು ಸಚಿವರು ಆದೇಶಿಸಿದ್ರು. ಆ ಬಳಿಕ ಪೋಲೀಸರ ಮಧ್ಯಸ್ಥಿಕೆಯಲ್ಲಿ ಅಧಿಕಾರಿಯನ್ನು ಸಮಾಧಾನಪಡಿಸಿ ಸಭೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ರು. ನಂತರ ಅಧಿಕಾರಿ ವರ್ತನೆಯ ವಿರುದ್ದ ಸಭೆಯಲ್ಲಿ ಠರಾವು ತೆಗೆಯುವಂತೆ ಸಚಿವರು ಸೂಚನೆ ನೀಡಿದ್ರು…
ಇನ್ನು ಹೆಸ್ಕಾಂ ಇಲಾಖೆಯಲ್ಲಿ ನನ್ನ ಅವಧಿಯಲ್ಲಿ 2011ರಲ್ಲಿನ 110 ಕೆವಿ ವಿದ್ಯುತ್ ಘಟಕದ ಮಂಜೂರಿ ಬಗ್ಗೆ ಪ್ರಯತ್ನ ಮಾಡಿದ್ದು, ಇನ್ನು ಹಾಗೆ ಇದ್ದು ಟೆಂಡರ ಪ್ರಕ್ರಿಯೆ ಹಂತದಲ್ಲಿದೆ. ಶೀಘ್ರವಾಗಿ ಘಟಕ ಸ್ಥಾಪನೆ ಆಗುವಂತೆ ಹೆಸ್ಕಾಂ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹಾಗೂ ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗೆ ಸೂಚಿಸಿದ್ರು…
ಇನ್ನು ಕೆ.ಎಸ್.ಆರ್.ಟಿ.ಸಿ. ಬಸ್ ವಿಚಾರದಲ್ಲಿ 10 ಚಾಲಕ ನಿರ್ವಾಹಕರ ಕೊರತೆ ಇರುವ ಬಗ್ಗೆ ಡಿಪ್ಪೋ ಮ್ಯಾನೇಜರ್ ಸಚಿವರಲ್ಲಿ ಪ್ರಸ್ತಾಪಿಸಿದ್ರು. ಇದಕ್ಕೆ ಸಚಿವರು 2017-18 ರಲ್ಲಿ ಈ ಮೊದಲಿನಂತೆ ಬಸ್ ಸಂಚಾರದ ಶೆಡ್ಯುಲ್ ಮತ್ತೆ ಆರಂಭ ಆಗಬೇಕು. ಮುಂಡಳ್ಳಿ ಅಳ್ವೇಕೋಡಿ ಬಸ್ ಸಂಚಾರ ಮತ್ತೆ ನಡೆಯಬೇಕು. ಮಹಿಳೆಯರಿಗೆ ಉಚಿತ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿ ಕರೆ ಮಾಡುತ್ತಿದ್ದಾರೆ. ಬಸ್ ಬೇಕಿದ್ದರೆ ತಿಳಿಸಿ. ದೂರದ ಊರಿಗೆ ಹೋಗುವ ಎಕ್ಸ್‌ಪ್ರೆಸ್ ಬಸ್ ಗಳನ್ನು ಸಹ ನಿಲ್ಲಿಸದೇ ಅದರ ಸಂಚಾರ ಸಹ ಮುಂದುವರೆಸಿರಿ. ಇನ್ನು ನಿಲ್ದಾಣದಲ್ಲಿ ಸ್ವಚ್ಚತೆ ಬಗ್ಗೆ ಗಮನ ಹರಿಸಿ ಬಸ್ ನಿಲ್ದಾಣದ ಎದುರಿನ ಹೊಂಡವನ್ನು ಐಆರಬಿ ಕಂಪನಿಯಿಂದ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ರು…
ಮುರುಡೇಶ್ವರದಲ್ಲಿ ಶೌಚಾಲಯದ ಟೆಂಡರ ಆಗಿಲ್ಲ ಎಂದು ಸಹಾಯಕ ಆಯುಕ್ತರು ಪತ್ರಿಕೆಯಲ್ಲಿ ಬಂದಿರುವ ಬಗ್ಗೆ ಪ್ರಸ್ತಾಪಿಸಿದರು. ಟೆಂಡರ ಹಣವನ್ನು ಹೆಚ್ಚಿಸಿ ಟೆಂಡರ ಮಾಡಿಸಿ ಎಂದು ಸಚಿವರು ತಿಳಿಸಿದರು. ಪೋಲಿಸ್ ಇಲಾಖೆಯು ಭಟ್ಕಳದಲ್ಲಿ ಗಾಂಜಾ ಡ್ರಗ್ಸ ಅಫಿಮ್ ಗಳಂತಹ ಪ್ರಕರಣದ ಮೇಲೆ ಕಠಿಣ ಕ್ರಮ ತೆಗದುಕೊಳ್ಳಬೇಕು ಎಂದು ಸಚಿವರು ಡಿವೈಎಸ್ಪಿ ಶ್ರೀಕಾಂತ ಅವರಿಗೆ ಸೂಚನೆ ನೀಡಿದರು.
ಗ್ರಹಲಕ್ಷ್ಮೀ ಯೋಜನೆಗೆ ಭಟ್ಕಳದಲ್ಲಿ 29370 ನೋಂದಣಿ ಆಗಿದೆ. ಇನ್ನು 5558 ಬಾಕಿ ಇದೆ. ಒಟ್ಟು ಭಟ್ಕಳದಲ್ಲಿ 83% ನೋಂದಣಿ ಆಗಿದೆ. ಎಲ್ಲಾ ಯೋಜನೆಗೆ ತಾಲೂಕಿಗೆ 15 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದ ಸಚಿವರು ಬಡವರ ಪರವಾಗಿ ನುಡಿದಂತೆ ನಡೆಯಲಿದ್ದೇವೆ ಎಂದರು…
ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ಬಿಪಿಎಲ್ ಕಾರ್ಡ ಜನರಿಗೆ ಕೊಡದೆ 2-3 ವರ್ಷ ಆಗಿದೆ. ಭಟ್ಕಳದ ಆಹಾರ ನಿರೀಕ್ಷಕ ಅಧಿಕಾರಿಯನ್ನು ಟ್ರಾನ್ಸಪರ್ ಮಾಡಿದ್ದಕ್ಕೆ ಕಾರಣವಿದೆ. ಹೆಚ್ಚು ದಿನ ಇಟ್ಟು ಕೊಳ್ಳಬಾರದು ಯಾವ ಅಧಿಕಾರಿಯನ್ನು ಇಡಬಾರದು ತಕ್ಷಣಕ್ಕೆ ರಿಲಿವ್ ಕೊಡಬೇಕು ಎಂದು ತಹಸೀಲ್ದಾರ ತಿಪ್ಪೇಸ್ವಾಮಿಗೆ ಖಡಕ ಸೂಚನೆ ನೀಡಿದ್ರು…
ನಂತರ ವಿವಿಧ ಇಲಾಖೆ ಅಧಿಕಾರಿಗಳಿಗೆ ಇಲಾಖೆಯಲ್ಲಿ ಎಷ್ಟು ಹಣ ಬಾಕಿ ಇದೆ ಎಂದು ಪ್ರಶ್ನಿಸಿದ್ದು ಸಾಕಷ್ಟು ಇಲಾಖೆಯಲ್ಲಿ ಸರಕಾರ ಸಾಲ ತೀರಿಸಬೇಕಾಗಿರುವ ವಿಚಾರ ತಿಳಿದು ಬಿಜೆಪಿಯವರು ಸಾಲ ಮಾಡುತ್ತಾರೆ. ಕಾಂಗ್ರೆಸ್ ಸರಕಾರ ಬಂದು ಸಾಲ ತೀರಿಸಿ ಬಡವರಿಗೆ ಸಹಾಯ ಮಾಡಬೇಕು ಇದು ನಮ್ಮ ವಿಪರ್ಯಾಸ ಎಂದು ಬಿಜೆಪಿಯ ಅಧಿಕಾರವನ್ನು ಪ್ರಶ್ನಿಸಿದರು. ಬಿಜೆಪಿ ಅವರದ್ದು ಕೇವಲ ಬಾಯಲ್ಲಿ ಅಭಿವೃದ್ಧಿ ಹೊರತು ಕ್ರಿಯೆಯಲ್ಲಿ ಅವರದ್ದು ಸುಳ್ಳು ಅಭಿವೃದ್ಧಿ ಎಂದು ವ್ಯಂಗ್ಯವಾಡಿದ್ರು.
ಈ ಸಂಧರ್ಭದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್. ತಹಸೀಲ್ದಾರ ತಿಪ್ಪೇಸ್ವಾಮಿ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ನಮನೆ ಮೊದಲಾದವರು ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ರು…