ಮದ್ನಳ್ಳಿ ಜನತೆಯ ಮನಸ್ಸು ಗೆದ್ದ ಮುಖ್ಯೋಪಾಧ್ಯಯಿನಿ ಎಂ.ಎಸ್.ಹಳ್ಳೂರ ಅವರಿಗೆ ಬೀಳ್ಕೊಡುಗೆ

ಹಳಿಯಾಳ : ಮದ್ನಳ್ಳಿ ಗ್ರಾಮದ ಜನತೆಯ ಮನಸ್ಸು ಗೆದ್ದ ಮದ್ನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿಯಾಗಿ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಎಸ್.ಹಳ್ಳೂರ ಅವರಿಗೆ ಊರ ಗ್ರಾಮಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಮದ್ನಳ್ಳಿ ಶಾಲೆಯ ಮುಖ್ಯೋಪಾಧ್ಯಾಯನಿಯಾಗಿ ಶಾಲೆಯ ಪ್ರಗತಿಗಾಗಿ ಆಹ್ವಾನಿಸಿ ಶ್ರಮಿಸಿದ, ಶಾಲೆಗೆ ಧ್ವಜಸ್ತಂಭ, ಆವರಣ ಗೇಟ್ ನಿರ್ಮಿಸಿಕೊಟ್ಟ ಹಾಗೂ ಗ್ರಾಮದಲ್ಲಿ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸಿ, ಗ್ರಾಮಸ್ಥರ ಆತ್ಮೀಯತೆ ಮತ್ತು ವಾತ್ಸಲ್ಯಕ್ಕೆ ಪಾತ್ರರಾದ ಎಂ.ಎಸ್.ಹಳ್ಳೂರ ಅವರನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಪೂರ್ಣ ಕುಂಭ ಕಳಸವನ್ನು ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರುಗನ್ನು ತಂದರು.

ಕಾರ್ಯಕ್ರಮದಲ್ಲಿ ಎಂಎಸ್ ಹಳ್ಳೂರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ವಿವೇಕ್ ಕವರಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅರ್ಜುನ ಚಲವಾದಿ,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಸತೀಶ್ ನಾಯಕ ಬಾವಿಕೇರಿ, ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸುಲೇಮಾನ್ ಶೇಖ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪ್ರಶಾಂತ ನಾಯಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಾಕೀರ್ ಜಂಗೂಬಾಯಿ, ಶಾಲಾ ಶಿಕ್ಷಕ ವೃಂದ ಹಾಗೂ ಊರಿನ ಗಣ್ಯರು, ತಾಲೂಕಿನ ಶಿಕ್ಷಕ ಬಾಂಧವರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.