ಹಿಮಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯು ಕುಮಾರಿ ದಿ ಗೋಪಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ. ಚಕ್ರ ಎಸೆತದ ರಾಷ್ಟ್ರೀಯ ಆಟಗಾರ ಶಿಕ್ಷಕ ಕೃಷ್ಣ ಗೌಡರವರು ಸಾಧನೆ ಮಾಡಲು ಗುರಿ ಇರಬೇಕು. ಇಂದು ಸರಕಾರ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದರು. ಮತ್ತೋರ್ವ ಅತಿಥಿ ಕುಮಾರ ಅಮಿತ ಗೌಡ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿದ ಕ್ಷಣಗಳನ್ನು ನೆನೆಪಿಸಿಕೊಂಡರು, ಹಿಮಾಲಯ ಶಾಲೆಯ ಪ್ರಾಚಾರ್ಯ ಸವಿತಾ ಕಾನೋಜಿ ಕ್ರೀಡೆಯ ಮಹತ್ವದ ಬರಿತು ತಿಳಿಸಿದರು. ದೈಹಿಕ ಶಿಕ್ಷ ಅಮರ ಗಾಂವಕರ ಪಾಸ್ತವಿಕ ಮಾತನಾಡಿದರು. ಕ್ರೀಡೆಯಲ್ಲಿ ಸಾಧನೆ ಮಾಡಿದ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಎಮ್., ಐ. ಮಾಲಿ ಅಧ್ಯಕ್ಷತೆ ವಹಿಸಿ ಕ್ರೀಡೆ ಜೀವನದ ಅವಿಭಾಜ್ಯ ಅಂಗ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕ್ರೀಡೆಯಲ್ಲಿ ವಿಜೇತರಾದ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕ್ರೀಡೆಗೆ ಸಂಬಂಧಿಸಿದ ನೃತ್ಯ ಮಾಡುವುದಲ, ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮವನ್ನು ನಿಮಾರಿಕಾ, ನಾಯಕ ಸ್ವಾಗತಿಸಿದೆ. ಖುಷಿ ಕುಚ್ಚಲಕರ ವಂದಿಸಿದರು. ರಕ್ಷಾ ಹರಿಕಂತ್ರ ಕಾರ್ಯಕ್ರಮ ನಿರೂಪಿಸಿದರು.