ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯಲ್ಲಿ ಬಹುಮುಖ ಪ್ರತಿಭೆ ಅಭಿಮಾನ್ ಕುಡುವಕ್ಕಲ್ ನಿಗೆ ಸನ್ಮಾನ

ದಾಂಡೇಲಿ :‌ ನಗರದ ಬಹುಮುಖ ಪ್ರತಿಭೆ ಅಭಿಮಾನ್ ಬಸವರಾಜ ಕುಡುವಕ್ಕಲ್ ಈತನ ಸಾಧನೆಗೆ ನಗರದ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯಲ್ಲಿ ಇಂದು ಸನ್ಮಾನಿಸಲಾಯ್ತು.

ಭಗವದ್ಗೀತೆಯ 18 ಅಧ್ಯಾಯಗಳನ್ನೂ ಸುಶ್ರಾವ್ಯವಾಗಿ , ನಿರರ್ಗಳವಾಗಿ, ಸ್ಪಷ್ಟವಾಗಿ ವಾಗ್ದೋಷವಿಲ್ಲದಂತೆ
ಪಠಿಸಬಲ್ಲ ಜಾಣ್ಮೆ ಬಾಲ್ಯದಿಂದಲೇ ಕರಗತ ಮಾಡಿಕೊಂಡಿರುವ ಹಾಗೂ ಯಕ್ಷಗಾನ ಕಲಾವಿದನಾಗಿಯೂ ಗಮನ ಸೆಳೆದಿರುವುದಲ್ಲದೇ ಈಗಾಗಲೆ ಜಿಲ್ಲೆ, ರಾಜ್ಯ ಮಟ್ಟದ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಸನ್ಮಾನಗಳನ್ನು ಮುಡಿಗೇರಿಸಿಕೊಂಡು ನಗರದ ಕೀರ್ತಿಯನ್ನು ಬೆಳಗಿಸಿದ ಹಿನ್ನಲೆಯಲ್ಲಿ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ ಪ್ರವರ್ತಕರಾದ ಸಾಹಿತಿ ಮಾಸ್ಕೇರಿ ಎಂ.ಕೆ‌.ನಾಯಕ ಅವರು ಅಭಿಮಾನ್ ಬಸವರಾಜ ಕುಡುವಕ್ಕಲ್ ಈತನನ್ನು ಸನ್ಮಾ‌ನಿಸಿ, ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಅಭಿಮಾನ್ ಈತನ ತಂದೆ ಉಪನ್ಯಾಸಕ ಬಸವರಾಜ ಕುಡುವಕ್ಕಲ್, ತಾಯಿ ಉಪನ್ಯಾಸಕಿ ನಿರುಪಮ ನಾಯಕ, ಜೆವಿಡಿ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಯಿನಿ ನಂದಿನಿ ನಾಯ್ಕ, ಪ್ರೌಢಶಾಲಾ ಶಿಕ್ಷಕಿ ಜ್ಯೋತಿ ಭಾಸ್ಕರನ್, ಸಂಸ್ಥೆಯ ಸಂಚಾಲಕಿ ಭಾರತಿ ಕವರಿ ಮೊದಲಾದವರು ಉಪಸ್ಥಿತರಿದ್ದರು.