ಕುಡುಕರ ಅಡ್ಡೆಯಾಗುತ್ತಿರುವ ದಾಂಡೇಲಿಯ ಡಿ.ಎಫ್.ಎ ಮೈದಾನ

ದಾಂಡೇಲಿ : ನಗರದ ಪ್ರಮುಖ ಮೈದಾನಗಳಲ್ಲಿ ಅಗ್ರಸ್ಥಾನದಲ್ಲಿರುವ ಡಿ.ಎಫ್.ಎ ಮೈದಾನ ಇದೀಗ ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗತೊಡಗಿದೆ.

ಈ ಮೈದಾನದಲ್ಲಿ ಸಾಕಷ್ಟು ಜಿಲ್ಲಾಮಟ್ಟದ ಕ್ರೀಡಾಕೂಟಗಳು ಆಯೋಜನೆಗೊಂಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ವಿಶಾಲವಾದ ಹಸಿರು ಹುಲ್ಲಿನ ಸುಂದರವಾದ ಈ ಮೈದಾನವನ್ನು ರಾತ್ರಿ ವೇಳೆಯಲ್ಲಿ ಕುಡುಕರು ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಕುಡಿದು ಖಾಲಿ ಮಾಡಿದ ಮಧ್ಯದ ಬಾಟಲಿಗಳನ್ನು ಹಾಗೂ ಖಾಲಿ ಪ್ಲಾಸ್ಟಿಕ್ ಲಕೋಟೆಗಳನ್ನು ಮತ್ತು ಇನ್ನಿತರ ತ್ಯಾಜ್ಯಗಳನ್ನು ಮೈದಾನದಲ್ಲಿ ಚೆಲ್ಲಿ ಹೋಗುವ ಮೂಲಕ ಅಸ್ವಚ್ಚತೆಗೆ ಕಾರಣವಾಗುತ್ತಿದ್ದಾರೆ. ಇದೇ ಮೈದಾನಕ್ಕೆ ತಾಗಿಕೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದೆ. ಆದರೆ ರಾತ್ರಿ ವೇಳೆಯಲ್ಲಿ ಕುಡುಕರು ನಿರಾತಂಕವಾಗಿ ಮೋಜು ಮಸ್ತಿಗೆ ಈ ಮೈದಾನವನ್ನು ಬಳಕೆ ಮಾಡಿ ಒಳ್ಳೆಯ ಮೈದಾನವನ್ನು ಹಾಳುಗೆಡವಲು ಮುಂದಾಗಿರುವುದು ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ಒಂದು ದ್ವಿಚಕ್ರ ವಾಹನ ಹೋಗುವಾಗಲೂ ಹತ್ತು ಸಲ ವಿಚಾರಿಸುವ ಡಿಎಫ್ಎ ಭದ್ರತಾ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸಲು ಅವಕಾಶ ಕೊಡುವುದಾದರೂ ಏತಕ್ಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ.