ಇಸ್ರೋ ಸಾಧನೆಗೆ ವಿದ್ಯಾರ್ಥಿಗಳ ಬಹುಪರಾಕ್

ಅಂಕೋಲಾ: ಮನುಕುಲದ ಏಳಿಗೆಗಾಗಿ ನಿರಂತರ ಪರಿಶ್ರಮದಿಂದ ಇಸ್ರೊ ವಿಜ್ಞಾನಿಗಳು ಚಂದ್ರನ ದಕ್ಷಿಣ ಭಾಗದಲ್ಲಿಯೇ ಅಧ್ಯಯನಕ್ಕೆ ವಿಕ್ರಂ ಲ್ಯಾಂಡರ್ ಚಂದ್ರಯಾನ – 3ನ್ನು ಇಳಿಸಿ ಯಶಸ್ವಿ ಆಗಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ ಮಂಜುನಾಥ ಇಟಗಿ ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿಜ್ಞಾನ ಸಂಘದ ಅಡಿಯಲ್ಲಿ ಜರುಗಿದ ಚಂದ್ರಯಾನ – 3 ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ವಿಜ್ಞಾನಿಗಳು ಇಡಿ ಜಗತ್ತು ಇಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. ಅಲ್ಲದೇ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ದಿನವಾಗಿದೆ ಎಂದರು.
ವಿಜ್ಞಾನ ಸಂಘದ ಉಪಾಧ್ಯಕ್ಷ ರಾಘವೇಂದ್ರ ಅಂಕೋಲೆಕರ ಮಾತನಾಡಿ ಕಳೆದ 50 ವರ್ಷಗಳಿಂದ ಚಂದ್ರನ ಮೇಲೆ ಕೆಲವೇ ದೇಶಗಳು ಅಧ್ಯಯನ ಮಾಡುತ್ತಾ ಬಂದಿವೆ. ಅವುಗಳಲ್ಲಿ ಭಾರತವು ಯಶಸ್ವಿ ದೇಶಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಚಂದ್ರನಲ್ಲಿರುವ ಸಂಪನ್ಮೂಲಗಳ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಮನೋಜ ಗೌಡ, ಪ್ರತೀಕ ನಾಯಕ ಚಂದ್ರಯಾನದ ವಿಶೇಷತೆಗಳ ಬಗ್ಗೆ ಮಾತನಾಡಿದರು. ಸಂಪ್ರಿಯಾ ಎಸ್ ಸಂಗಡಿಗರು ಪ್ರಾರ್ಥಿಸಿದರು. ಶ್ವೇತಾ ಪಟಗಾರ ಸ್ವಾಗತಿಸಿದರು. ರಕ್ಷಾ ಹೊಸಮನೆ ವಂದಿಸಿದರು. ದೀಪಾಲಿ ನಾಯಕ ನಿರೂಪಿಸಿದರು. ವೇದಿಕೆಯಲ್ಲಿ ಉಪನ್ಯಾಸಕಿಯಾದ ಪ್ರವೀಣಾ ನಾಯಕ ಹಾಗೂ ಕಾರ್ಯದರ್ಶಿ ಉನ್ನತಿ ನಾಯಕ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಅಮ್ರಿನಾಜ್ ಶೇಖ, ಪೂರ್ವಿ ಹಳ್ಗೇಕರ, ಹಾಗೂ ಪ್ರಶಿಕ್ಷಣಾರ್ಥಿಗಳು ಸಹಕರಿಸಿದರು.