ಸಮಗ್ರ ವೀರಾಗ್ರಣಿ ಮುಡಿಗೇರಿಸಿಕೊಂಡ ವಿದ್ಯಾರ್ಥಿಗಳು

ಸಿದ್ದಾಪುರ : ಆರ್. ವಿ. ಪ್ರೌಢಶಾಲೆ ಇಟಗಿ ವತಿಯಿಂದ ನಡೆದ ಬಿಳಗಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಸೀತಾರಾಮಚಂದ್ರ ಪ್ರೌಢಶಾಲೆ (ಎಸ್. ಆರ್ ಪ್ರೌಢಶಾಲೆ ) ಬಿಳಗಿಯ ವಿದ್ಯಾರ್ಥಿಗಳು ವಲಯದಲ್ಲೇ ಅತಿಹೆಚ್ಚು ಅಂಕ ಗಳಿಸುವುದರ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಾಲಕರ ಕಿರಿಯರ ವಿಭಾಗ ಚಕ್ರ ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಚೆಸ್ ನಲ್ಲಿ ಪ್ರಥಮ, ಹಡ೯ಲ್ಸ್ ದ್ವಿತೀಯ. ಬಾಲಕರ ಹಿರಿಯರ ವಿಭಾಗ ಚಕ್ರ ಎಸೆತ, 1500 ಮೀ, 200 ಮೀ ಪ್ರಥಮ 400 ಮೀ, ಗುಂಡು ಎಸೆತ, ಜಾವಲಿನ್ ಎಸೆತ ದ್ವೀತಿಯ ಮತ್ತು ತ್ರಿವಿಧ ಜಿಗಿತದಲ್ಲಿ ತೃತೀಯ. ಗುಂಪು ಆಟಗಳಲ್ಲಿ ಕಬ್ಬಡ್ಡಿ ಪ್ರಥಮ ,ರೀಲೆ ಪ್ರಥಮ, ಖೋಖೋ ಪ್ರಥಮ
ಬಾಲಕಿಯರ ಕಿರಿಯರ ವಿಭಾಗ : 100 ಮೀ, 400 ಮೀ, 600ಮೀ, ಗುಂಡು ಎಸೆತ ಪ್ರಥಮ, ಚಕ್ರ ಎಸೆತ, ಹರ್ಡಲ್ಸ್, ಎತ್ತರ ಜಿಗಿತ, ಉದ್ದ ಜಿಗಿತ ದ್ವಿತೀಯ. ಬಾಲಕಿಯರ ಹಿರಿಯರ ವಿಭಾಗ : 200 ಮೀ, 100 ಮೀ, ಉದ್ದ ಜಿಗಿತ, ಹಡ೯ಲ್ಸ್ , ಚಕ್ರ ಎಸೆತ, ಗುಂಡು ಎಸೆತ ಪ್ರಥಮ ಮತ್ತು 400ಮೀ ,3000 ಮೀ ತೃತೀಯ. ಗುಂಪು ಆಟಗಳಲ್ಲಿ ಕಬ್ಬಡ್ಡಿ ಪ್ರಥಮ, ರೀಲೆ ಪ್ರಥಮ, ಖೋಖೋ ದ್ವೀತಿಯ. ಈ ರೀತಿ ಗುಂಪು ಹಾಗೂ ವಯಕ್ತಿಕ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿಗಳು ಪಲ್ಲವಿ. ಎ.ಶೇಟ್ ಮತ್ತು ಇಂಚರಾ. ವಿ. ನಾಯ್ಕ ವೀರಗ್ರಣಿ ಪಡೆದುಕೊಂಡಿದ್ದಾರೆ.