ಯಲ್ಲಾಪುರ: ಒಂದೇ ಕಾಮಗಾರಿಗೆ 2-3 ಕಡೆಗಳಿಂದ ಅನುದಾನ ಹಂಚಿಕೆಯಾಗದಂತೆ ಎಚ್ಚರ ವಹಿಸಬೇಕು -ಡಿಡಿಪಿಐ ಪಿ.ಬಸವರಾಜು

ಯಲ್ಲಾಪುರ: ಒಂದೇ ಕಾಮಗಾರಿಗೆ 2-3 ಕಡೆಗಳಿಂದ ಅನುದಾನ ಹಂಚಿಕೆಯಾಗದಂತೆ ಎಚ್ಚರ ವಹಿಸಬೇಕು. ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ವಾಪಾಸು ಹೋಗದಂತೆ ನೋಡಿಕೊಳ್ಳಬೇಕೆಂದು ಡಿಡಿಪಿಐ ಪಿ.ಬಸವರಾಜು ಹೇಳಿದರು.
ಅವರು ತಾ.ಪಂ ಆವಾರದ ಗಾಂಧಿ ಕುಟೀರದಲ್ಲಿ ಗುರುವಾರ ತಾಲೂಕು ಪಂಚಾಯಿತಿಯ ಜಮಾಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಮಾಬಂದಿ ಸಭೆಯಲ್ಲಿ ನೀಡಿದ ಮಾಹಿತಿಯಂತೆ ಎಲ್ಲಾ ಕಾಮಗಾರಿಗಳು ಸಮರ್ಪಕವಾಗಿ ನಡೆದ ಬಗೆಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು.
ಕಳೆದ ಸಾಲಿನ ಆರಂಭಿಕ ಶಿಲ್ಕು 4.58 ಕೋಟಿ ರೂ ಇತ್ತು. ನಿಗದಿಪಡಿಸಿದ ಅನುದಾನ 63.15 ಕೋಟಿ ರೂ ಆಗಿದ್ದು, ಸರ್ಕಾರದಿಂದ ಒಟ್ಟು 67.74 ಕೋಟಿ ರೂ ಅನುದಾನ ಬಂದಿತ್ತು. 55.48 ಕೋಟಿ ರೂ ಅನುದಾನ ಖರ್ಚಾಗಿದ್ದು, ಒಟ್ಟು 11.90 ಕೋಟಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಆಡಳಿತಾಧಿಕಾರಿ ಟಿ.ಎಚ್.ನಟರಾಜ, ತಾ.ಪಂ ಇಒ ಜಗದೀಶ ಕಮ್ಮಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.