ದಾಂಡೇಲಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು,ತಾಲೂಕು ಘಟಕ ದಾಂಡೇಲಿ ವತಿಯಿಂದ ಆಯೋಜಿಸಲಾದ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಂತರ್ಜಾಲ ಆಧಾರಿತ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು.
ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ 25 ಹಾಗೂ ಹಿರಿಯರ ವಿಭಾಗದಲ್ಲಿ 62 ಒಟ್ಟು 87 ಮಕ್ಕಳು ಭಾಗವಹಿಸಿದ್ದರು. ಕಿರಿಯರ ವಿಭಾಗದಲ್ಲಿ ಅನನ್ಯಾ ಲೀಲಾಧರ ಮೊಗೇರ ಪ್ರಥಮ, ವಿದಿತಿ ಗುರುರಾಜ್ ದ್ವಿತೀಯ ಹಾಗೂ ಅವ್ಯಯ ಅನಂತ ಹೆಗಡೆ ತೃತೀಯ ಸ್ಥಾನ ಪಡೆದರೇ, ಹಿರಿಯರ ವಿಭಾಗದಲ್ಲಿ ಪ್ರಗತಿ ಗಣಪತಿ ಹೆಗಡೆ ಪ್ರಥಮ, ಅದಿತಿ ಲೀಲಾಧರ ಮೊಗೇರ ದ್ವಿತೀಯ ಹಾಗೂ ಸಮೃದ್ಧಿ ಸಣ್ಣಪ್ಪ ಭಾಗ್ವತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಎರಡೂ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಗಳಿಸಿದ ತಲಾ10 ಮಕ್ಕಳಿಗೆ ಆಯ್ಕೆ ಮಾಡಿ ಉತ್ತಮ ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಯಿತು.
ಗೀತಾ ಪಿ ಮಹಾಲೆ ಅಂಕೋಲಾ ಹಾಗೂ ಅನಂತ ಎಮ್ ತಾಮ್ಹನ್ಕರ್ ಮೈಸೂರು ಇವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.
ಫಲಿತಾಂಶ ಪ್ರಕಟಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ ವೆಂಕಮ್ಮ.ಡಿ.ಗಾಂವ್ಕರ್ ಮಕ್ಕಳ ಭಾಗವಹಿಸುವಿಕೆ ಕಂಡು ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್.ಎಸ್.ಉಪ್ಪಾರ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಅನಾವರಣಕ್ಕಾಗಿಯೇ ಎಂದು ಹುಟ್ಟಿಕೊಂಡಿರುವ ಈ ವೇದಿಕೆಯ ಆಶಯವನ್ನು ಸಾಕಾರಗೊಳಿಸುತ್ತಿರುವ ದಾಂಡೇಲಿ ಘಟಕದ ಕಾರ್ಯ ಶ್ಲಾಘಿಸಿದರು.
ಪ್ರವೀಣಕುಮಾರ ಸುಲಾಖೆ, ಗಿರೀಶ್ ಶಿರೋಡ್ಕರ್ ಹಾಗೂ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿಯವರು ಅತಿಥಿಗಳಾಗಿ ಭಾಗವಹಿಸಿ ದೇಶಾಭಿಮಾನ ಬೆಳೆಸುವ ಸ್ಪರ್ಧೆಯು ಸಂಚಲನ ಮೂಡಿಸಿದೆ. ಪುಟಾಣಿ ಮಕ್ಕಳ ಭಾಗವಹಿಸುವ ಹುಮ್ಮಸ್ಸು ಕಂಡು ಸ್ಪರ್ಧೆಯ ಆಯೋಜನೆ ಸಾರ್ಥಕವಾಗಿದೆಯೆಂದರು.
ಕು.ಅಂಶಿಕಾ ಎ ಎನ್ ಪ್ರಾರ್ಥಿಸಿದರೆ, ಕೇಂ.ಕ.ಸಾ.ವೇ ದಾಂಡೇಲಿ ಘಟಕದ ಅಧ್ಯಕ್ಷೆ ದೀಪಾಲಿ ಸಾಮಂತ ಸ್ವಾಗತಿಸಿ ನಿರ್ವಹಿಸಿದರು. ಸುಜಾತ ವೋಲವಿನ್ ನೊರೋನ್ಹಾ ವಂದಿಸಿದರೆ,ಆನಂದ್.ಜಿ.ಎನ್ ಸಹಕರಿಸಿದರು.