ದಾಂಡೇಲಿ : ಶ್ರಮಜೀವಿಗಳು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ವಯೋವೃದ್ಧರ ಹೆಬ್ಬೆಟ್ಟು ಬೆರಳು ಸವಕಳಿಯಾಗಿರುವುದರಿಂದ ಸರಕಾರದ ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಸೌಲಭ್ಯಕ್ಕಾಗಿ ಆಧಾರ್ ಲಿಂಕ್ ಮಾಡಲು ಹೆಬ್ಬೆಟ್ಟು ಪಡೆದುಕೊಳ್ಳಲಾಗುತ್ತಿದ್ದು, ಇದರಿಂದ ಹೆಬ್ಬೆಟ್ಟು ಬೆರಳು ಸವಕಳಿಯಾದವರು ಸಂಬಂಧಿತ ಸೌಲಭ್ಯವನ್ನು ಪಡೆಯಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಹೆಬ್ಬೆಟ್ಟು ಬೆರಳು ಸವಕಳಿಯಾದವರಿಗೆ ಪರ್ಯಾಯ ಕ್ರಮವನ್ನು ಕೈಗೊಳ್ಳಬೇಕೆಂದು ಉತ್ತರ ಕನ್ನಡ ಜಿಲ್ಲಾ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶಾಂತಾರಾಮ ನಾಯ್ಕ ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಅವರು ಇಂದು ಮಂಗಳವಾರ ಸಂಜೆ ದಾಂಡೇಲಿ ನಗರದಲ್ಲಿ ಮಾಧ್ಯಮದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.