ಸಿದ್ದಾಪುರ : ತಾಲೂಕಿನ ಮಾಣಿಹೊಳೆ ಬಸ್ ನಿಲ್ದಾಣವು ಶಿಥಿಲಾವಸ್ಥೆ ಹಂತಕ್ಕೆ ತಲುಪಿದ್ದು ಸಾರ್ವಜನಿಕರಿಗೆ ಅಪಾಯವಾಗುವ ಮೊದಲು ಸುರಕ್ಷತಾ ಕ್ರಮ ಕೈಗೊಂಡು ನೂತನ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಹಾರ್ಸಿಕಟ್ಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದಾಪುರ ಹೆಗ್ಗರಣಿ ರಸ್ತೆಯಲ್ಲಿರುವ ಬಸ್ ನಿಲ್ದಾಣವು ಶಿಥಿಲಾವಸ್ಥೆ ಹಂತಕ್ಕೆ ತಲುಪಿದ್ದು ರಿಪುಗಳು ಮುರಿದು, ಹಂಚುಗಳು ಒಡೆದು ಬಸ್ಸಿಗಾಗಿ ಕಾಯುತ್ತ ಕುಳಿತಿರುವ ಪ್ರಯಾಣಿಕರಿಗೆ ಅಪಾಯಗಳಾಗುವ ಮುನ್ಸೂಚನೆಗಳಿವೆ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಜನಪ್ರತಿನಿದಿನಗಳು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿ ಗಳು, ವೃದ್ಧರು, ರೋಗಿಗಳು ದಿನ ನಿತ್ಯ ಈ ಬಸ್ ನಿಲ್ದಾಣವನ್ನು ಉಪಯೋಗಿಸುವುದರಿಂದ ಅಪಾಯಗಳಾಗುವ ಮೊದಲು ನೂತನ ಬಸ್ ನಿಲ್ದಾಣ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.