ಜೋಯಿಡಾ : ರಾಜ್ಯದ ಮೊಟ್ಟ ಮೊದಲ ಹನಿ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಯಿಡಾ ತಾಲೂಕಿನ ನಾಗೋಡ ಕ್ರಾಸ್ ನಲ್ಲಿರುವ ಹನಿ ಪಾರ್ಕಿಗೆ ಇಂದು ಸೋಮವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಭೇಟಿ ನೀಡಿದರು.
ಹನಿ ಪಾರ್ಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರನ್ನು ಹನಿ ಪಾರ್ಕಿನ ಮುಖ್ಯಸ್ಥರಾದ ನರಸಿಂಹ ಭಟ್ಟ ಛಾಪಖಂಡ ಅವರು ಗೌರವಪೂರ್ವಕವಾಗಿ ಸ್ವಾಗತಿಸಿದರು.
ಹನಿ ಪಾರ್ಕನ್ನು ಸುತ್ತಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಜೇನಿನ ಬಗ್ಗೆ ಹನಿ ಪಾರ್ಕಿನ ಮುಖ್ಯಸ್ಥರಾದ ನರಸಿಂಹ ಭಟ್ಟ ಛಾಪಖಂಡ ಅವರಿಂದ ಜೇನಿನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಜೇನು ಹುಳವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹನಿ ಪಾರ್ಕಿನ ನಿರ್ಮಾಣ ಮತ್ತು ವ್ಯವಸ್ಥೆ ಹಾಗೂ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ ಹಾಗೂ ಹನಿ ಪಾರ್ಕಿನ ರೂಪಾ, ಪುಷ್ಪ, ಸುಮನ, ಶೈಲಾ ಮೊದಲಾದವರು ಉಪಸ್ಥಿತರಿದ್ದರು.



