ಪೌರಕಾರ್ಮಿಕರಿಗೆ ನೇಮಕಾತಿಗಿಂತ ಖಾಯಮಾತಿಯ ಅಗತ್ಯತೆ ಇದೆ – ಹರೀಶ ನಾಯ್ಕ

ಶಿರಸಿ: ಹೋರಾಟದ ಬಳಿಕ ಪೌರ ಕಾರ್ಮಿಕರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ನೇಮಕಾತಿ ಬದಲು ಅವರಿಗೆ ಖಾಯಮಾತಿಯ ಅಗತ್ಯತೆ ಇದೆ ಎಂದು ಸಿಐಟಿಯು ಪ್ರಮುಖ ಹರೀಶ ನಾಯ್ಕ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅನೇಕ ಪೌರ ಕಾರ್ಮಿಕರು ಹಿಂದಿನಿಂದಲೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ನೇಮಕಾತಿ ಪ್ರಕ್ರಿಯೆ ನಡೆಸಿದರೆ ಅವರಿಗೆ ಅನ್ಯಾಯವಾಗಲಿದೆ. ಹಲವರು ನೇಮಕಾತಿ ವಯಸ್ಸು ದಾಟಿದ್ದರಿಂದ ಈಗ ಸಲ್ಲಿಸುತ್ತಿರುವ ಸೇವೆಯಲ್ಲಿ ಖಾಯಮಾತಿ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಮೂರು ತಿಂಗಳ ಒಳಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಸರ್ಕಾರ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಪೌರ ಕಾರ್ಮಿಕರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ 4 ರಂದು ಕರೆ ನೀಡಲಾಗಿದ್ದ ಪ್ರತಿಭಟನೆ ವಾಪಸ್ ಪಡೆದಿದ್ದೇವೆ ಎಂದರು.

ಸಯ್ಯದ ಮುಜೀಬ್, ಕಿರಣ್, ಅಮೃತ, ಗಣಪತಿ ಎಚ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ನಾಯ್ಕ ಇತರರಿದ್ದರು.