ಕುಳಗಿ ಪ್ರಕೃತಿ ಶಿಬಿರದಲ್ಲಿ ಸಫಾರಿ ಮಾರ್ಗದರ್ಶಕರ ತರಬೇತಿ ಕಾರ್ಯಾಗಾರದ ಸಮಾರೋಪ

ದಾಂಡೇಲಿ : ತಾಲ್ಲೂಕಿನ ಕುಳಗಿಯಲ್ಲಿರುವ ವನ್ಯಜೀವಿ ಇಲಾಖೆಯ ಪ್ರಕೃತಿ ಶಿಬಿರದಲ್ಲಿ ಸಫಾರಿ ಮಾರ್ಗದರ್ಶಕರ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಇಂದು ಜರುಗಿತು.

4 ದಿನಗಳ ಸಪಾರಿ ಗೈಡ್ ತರಬೇತಿಯನ್ನು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಪರಿಸರ ಅಭಿವೃದ್ಧಿ ಸಮಿತಿಯ ಸಫಾರಿ ವಾಹನ ಮಾಲೀಕರು , ಚಾಲಕರು , ಸರಕಾರಿ ಸಫಾರಿ ವಾಹನ ಚಾಲಕರು ಮತ್ತು ಇಲಾಖೆಯ ಸಿಬ್ಬಂದಿಗಳಿಗೂ ಕೂಡ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಪರಿಸರ, ಪ್ರಾಣಿ, ಪಕ್ಷಿ ಉಭಯವಾಸಿಗಳು , ಸರಿಸೃಪಗಳ ಕುರಿತು , ಪ್ರಥಮ ಚಿಕಿತ್ಸೆ ಹೀಗೆ ಹಲವಾರು ವಿಷಯಗಳ ಕುರಿತು ತಿಳಿಸಿಕೊಡಲಾಯಿತು .

ಸಮಾರೋಪ ಸಮಾರಂಭದಲ್ಲಿ ಕಾಳಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೀಲೇಶ್ ಶಿಂಧೆ , ಕರ್ನಾಟಕ‌ ಜೀವ ವೈವಿಧ್ಯ ಮಂಡಳಿಯ ಮುಖ್ಯ ತರಬೇತಿದಾರರಾದ ರಾಹುಲ್ ಆರಾಧ್ಯ , ರವನೀತ್ ನಂಜಪ್ಪ , ಸಂದೀಪ ಶೆಟ್ಟಿ , ಕಾರ್ತೀಕ್, ಕಿರಣ್ ಹಾಗೂ ಇಲಾಖೆಯ ಓಂಕಾರ ಪೈ , ಕುಳಗಿ ವಲಯಾರಣ್ಯಾಧಿಕಾರಿ ಮಾಂತೇಶ್ ಪಾಟೀಲ್ ಹಾಗೂ ಪಣಸೋಲಿ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿ , ಉಪ ವಲಯ ಅರಣ್ಯಾಧಿಕಾರಿಗಳಾದ ಅಣ್ಣಪ್ಪ ಮತ್ತು ದರ್ಶನ್ ಉಪಸ್ಥಿತರಿದ್ದರು .