ದಾಂಡೇಲಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಧೀನದಲ್ಲಿ ಬರುವ ಸರಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ ಅನುದಾನಿತ ಶಿಕ್ಷಕರುಗಳಿಗೆ ಹಾಗೂ ಪದವಿ ಪೂರ್ವ ಕಾಲೇಜಿನ ಅನುದಾನಿತ ಉಪನ್ಯಾಸಕರುಗಳಿಗೂ ಸಹ 5 ರಿಂದ 8ನೇ ಸ್ಥಗಿತ ವೇತನ ಬಡ್ತಿ ದಿನಾಂಕ: 01.04.2012 ರಿಂದಲೇ ಜಾರಿಯಾಗುವಂತೆ ಸರಕಾರ ಆದೇಶ ಹೊರಡಿಸಿದೆ ಎಂದು ವಿಧಾನ ಪರಷತ್ತಿನ ಸದಸ್ಯ ಎಸ್.ವಿ.ಸಂಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹವಿರುವ ಶಿಕ್ಷಕರುಗಳಿಗೆ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಿ ಅವರ ವೇತನವನ್ನು ಪೂರ್ಣ ನಿಗದಿ ಪಡಿಸತಕ್ಕದ್ದು. ಈ ರೀತಿ ವೇತನ ಪುನ: ನಿಗದಿ ಪಡೆಸಿದ ಬಳಿಕ ಅದರ ಆರ್ಥಿಕ ಲಾಭವು ನಿವೃತ್ತರಾದ ಶಿಕ್ಷಕರು-ಉಪನ್ಯಾಸಕರುಗಳ ನಿವೃತ್ತಿ ವೇತನವನ್ನು ಕೂಡ ಪರಿಷ್ಕರಿಸಿ ಅವರ ಪಿಂಚಣಿ ಪರಷ್ಕರಣೆಯ ಲಾಭವನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮಂಜೂರು ಮಾಡಲು ಆದೇಶದಲ್ಲಿ ತಿಳಿಸಲಾಗಿದೆ ಎಂದು ವಿಧಾನ ಪರಷತ್ತಿನ ಸದಸ್ಯರಾದ ಎಸ್.ವಿ.ಸಂಕನೂರ ಅವರು ಮಾಧ್ಯಮಕ್ಕೆ ನೀಡಿದ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.