ದಾಂಡೇಲಿ ನಗರ ಸಭೆಗೆ ಜಿಲ್ಲಾಧಿಕಾರಿ ಗಂಗೂಬಾಯಿ.ಆರ್.ಮಾನಕರ ಭೇಟಿ

ದಾಂಡೇಲಿ : ನಗರ ಸಭೆಗೆ ಜಿಲ್ಲಾಧಿಕಾರಿ ಗಂಗೂಬಾಯಿ.ಆರ್.ಮಾನಕರ ಅವರು ಇಂದು ಸೋಮವಾರ ಬೆಳಿಗ್ಗೆ ಭೇಟಿಯಾದರು.

ನಗರ ಸಭೆಯ ಪರವಾಗಿ ಪೌರಾಯುಕ್ತರಾದ ಆರ್.ಎಸ್ಮಪವಾರ್ ಅವರು ಗೌರವಪೂರ್ವಕವಾಗಿ ಜಿಲ್ಲಾಧಿಕಾರಿಯವರನ್ನು ಬರಮಾಡಿಕೊಂಡರು. ನಂತರ ಆಡಳಿತಾಧಿಕಾರಿ ಕೊಠಡಿಯಲ್ಲಿ ಪೌರಾಯುಕ್ತ ಆರ್.ಎಸ್.ಪವಾರ್ ಹಾಗೂ ನಗರ ಸಭೆ ಸದಸ್ಯರ ಜೊತೆ ನಗರದ ಅಭಿವೃದ್ದಿ ಮತ್ತು ಆಗಬೇಕಾದ ಕೆಲಸ‌ ಕಾರ್ಯಗಳ‌ ಬಗ್ಗೆ, ಯುಜಿಡಿ ಮನೆ ಮನೆ‌ ಸಂಪರ್ಕದ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಹಾಗೂ ನಗರ ಸಭೆಯ ಸದಸ್ಯರು ಉಪಸ್ಥಿತರಿದ್ದರು.