ಹಳಿಯಾಳ : ಅವರು ರಾಜ್ಯ ವಿಧಾನಸಭೆಗೆ 9 ಬಾರಿ ಶಾಸಕರಾಗಿ ಆಯ್ಕೆಯಾಗಿ ಇತಿಹಾಸವನ್ನು ನಿರ್ಮಿಸಿದವರು. ಅತೀ ಹೆಚ್ಚು ಬಾರಿ ಸಚಿವರಾದ ಹೆಗ್ಗಳಿಕೆಯನ್ನು ಕೂಡ ಹೊಂದಿದವರು. ಅಂದ ಹಾಗೆ ರಾಜ್ಯ ಕಂಡ ಅಗ್ರ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಹಳಿಯಾಳ – ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರು ರಾಜಕೀಯವಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ತನ್ನ ಛಾಪನ್ನು ಹೊಂದಿದ್ದರೂ, ಕ್ಷೇತ್ರಕ್ಕೆ ಬಂದಾಗ ಕ್ಷೇತ್ರದಲ್ಲಿ ಇರುವಂತಹ ಸಮಯದಲ್ಲಿ ಜನಸಾಮಾನ್ಯರ ಜೊತೆ ಆತ್ಮೀಯತೆಯಿಂದಿದ್ದು, ಸರಳತೆಯನ್ನು ಮೆರೆಯುವುದನ್ನು ಸಾಮಾನ್ಯವಾಗಿ ನೋಡುತ್ತಿದ್ದೇವೆ. ಕ್ಷೇತ್ರ ಸಂಚಾರ ಮಾಡುವಂತಹ ಸಂದರ್ಭದಲ್ಲಿ ಆಯಾಯ ಗ್ರಾಮದ ಅಂಗಡಿ, ಹೋಟೆಲ್ ಗಳಿಗೆ ಹೋಗುವ ಮುಂದುವರಿಸಿಕೊಂಡಿದ್ದಾರೆ.
ಅಂತೆಯೇ ಹಳಿಯಾಳ ತಾಲೂಕಿನ ಮುತ್ತಲಮುರಿ ಗ್ರಾಮದಲ್ಲಿರುವ ಸಣ್ಣ ಹೋಟೆಲಿಗೆ ಹೋಗಿ ಚುರುಮುರಿ ಮಂಡಕ್ಕಿಯನ್ನು ಸವಿದರು. ಮಂಡಕ್ಕಿ ಸವಿಯುತ್ತಿದ್ದಂತೆಯೇ ರಾಜಕಾರಣಕ್ಕೆ ಬರುವ ಮುಂಚೆ ವಕೀಲನಾಗಿದ್ದಾಗ ಪ್ರತಿದಿನ ಸಂಜೆ ಕಚೇರಿಗೆ ಮಂಡಕ್ಕಿಯನ್ನು ತರಿಸಿ ತಿನ್ನುತ್ತಿದ್ದ ಬಗ್ಗೆ ನೆನಪು ಮಾಡಿಕೊಂಡರು. ಒಟ್ಟಿನಲ್ಲಿ ಕರಿಕೋಟು ಹಾಕುವಾಗಲೇ ಮಂಡಕ್ಕಿಯ ಮೇಲಿದ್ದ ಪ್ರೀತಿ, ಪವರ್ ಪುಲ್ ರಾಜಕಾರಣಿಯಾದರೂ ಮುಂದುವರಿದೆ. ಮಂಡಕ್ಕಿ ತಿನ್ನುವ ಸಮಯದಲ್ಲಿ ದೇಶಪಾಂಡೆಯವರು ಮಿರ್ಚಿ ಮಸ್ತ್ ಐತಿ ಅಂದು ಕೆಪಿಸಿಸಿ ಸದಸ್ಯರಾದ ಸುಭಾಷ್ ಕೊರ್ವೇಕರ್ ಅವರಿಗೆ ಹಸಿಮೆಣಸಿನಕಾಯಿ ತಿನ್ನಿಸುವಲ್ಲಿ ಯಶಸ್ವಿಯಾದರು.




