ಹೊನ್ನಾವರ : ತಾಲೂಕಾ ಪತ್ರಕರ್ತರ ಸಂಘ ಮತ್ತು ನ್ಯೂ ಇಂಗ್ಲಿಷ್ ಸ್ಕೂಲ ಇಕೋ ಕ್ಲಬ್ ಇವರ ಆಶ್ರಯದಲ್ಲಿ ನ್ಯೂ ಇಂಗ್ಲಿಷ್ ಸ್ಕೂಲ ಆವಾರದಲ್ಲಿ ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಹವ್ಯಾಸಿ ಛಾಯಾಗ್ರಾಹಕ ಭವಾನಿಶಂಕರ ನಾಯ್ಕ ಇವರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ನ್ಯೂ ಇಂಗ್ಲೀಷ್ ಶಾಲಾ ಮುಖ್ಯಧ್ಯಾಪಕರಾದ ಜೈವಂತ ನಾಯ್ಕ ಮಾತನಾಡಿ ಜಗತ್ತಿನಲ್ಲಿ ಹಲವರು ತಮ್ಮ ಜೀವನದ ಹೆಚ್ಚಿನ ಸಮಯ ತಮಗೆ ಇಷ್ಟವಾದ ಛಾಯಚಿತ್ರ ಸೆರೆಹಿಡಿಯುವಲ್ಲಿ ಕಾಲ ಕಳೆಯುತ್ತಾರೆ. ಅನೇಕ ಪ್ರಾಣಿ ಪಕ್ಷಿಗಳು, ಸಾಮಾಜಿಕ ಪಿಡುಗುಗಳ ಚಿತ್ರ ಕ್ಷಣ ಮಾತ್ರದಲ್ಲಿ ಸೆರೆಹಿಡಿಯಬೇಕಾಗುದು. ಅನೇಕ ಬಾರಿ ಸೆರೆಹಿಡಿದ ಛಾಯಚಿತ್ರಗಳು ದಾಖಲೆಯಾಗಿ ಪರಿಗಣಿಸಿದೆ. ಇಲ್ಲಿ ಜಿಲ್ಲೆಯ ವೈವಿಧ್ಯಮಯ ಪರಿಸರದ ಮಾಹಿತಿಯೊಳಗೊಂಡ ಚಿತ್ರ ಪ್ರದರ್ಶನವಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
50 ವರ್ಷಗಳಿಂದ ಹವ್ಯಾಸಿ ಛಾಯಗ್ರಹಣ ತೊಡಗಿಕೊಂಡ ಬಿ.ಜೆ.ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಸತೀಶ ತಾಂಡೇಲ ಮಾತನಾಡಿ ಒಂದು ಚಿತ್ರ ನೂರು ಶಬ್ದಕ್ಕೆ ಸಮವಾಗಿದೆ. ಬಿ.ಜೆ.ನಾಯ್ಕ ಅವರು ೩೧ ವರ್ಷಗಳ ಕಾಲ ಈ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ೫೦ ವರ್ಷದಿಂದ ಛಾಯಚಿತ್ರ ತೆಗೆದು ಅನೇಕ ಬಾರಿ ಪ್ರದರ್ಶಿಸುವ ಮೂಲಕ ಹಲವು ಸ್ಥಳದ ಮಾಹಿತಿ ನೀಡಿದ್ದಾರೆ. ಇವರು ತೆಗೆದ ಹಲವು ಛಾಯಚಿತ್ರಗಳು ಪತ್ರಿಕೆಲಿ ಪ್ರದರ್ಶನವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪತ್ರಕರ್ತರಾದ ಎಚ್.ಎಂ. ಮಾರುತಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ಪೊಟೊಗ್ರಪಿ ಪರಿಕರಗಳನ್ನು ಅನ್ವೇಷನೆ ಮಾಡಿದ ದಿನವನ್ನು ವಿಶ್ವ ಛಾಯಚಿತ್ರದ ದಿನವಾಗಿ ಆಚರಿಸುತ್ತಾ ಬರಲಾಗಿದೆ. ಇಂದು ಪ್ರದರ್ಶನಗೊಂಡ ಛಾಯಚಿತ್ರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ರಾಷ್ಟ್ರೀಯ ಹಬ್ಬ ಹಾಗೂ ತಾಲೂಕಿಗೆ ವಿಶೇಷ ಅತಿಥಿಗಳು ಆಗಮಿಸಿದಾಗ ಇವರು ತೆಗೆದ ಛಾಯಚಿತ್ರ ಹಲವು ಪತ್ರಿಕೆಯಲ್ಲಿ ಪ್ರಸಾರವಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಇವರ ಛಾಯಚಿತ್ರ ಪ್ರದರ್ಶನವಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಛಾಯಗ್ರಾಹಕರಾದ ಬಿ.ಜ.ನಾಯ್ಕ ಶಾಲೆಯ ಇಕೋ ಕ್ಲಬ್ ಅಧ್ಯಕ್ಷೆ ಪುಷ್ಪಾ ಭಂಡಾರಕರ್,ಶಿಕ್ಷಕರಾದ ಯಶವಂತ, ಪುಷ್ಪಾ, ಪತ್ರಕರ್ತ ಶ್ರೀಧರ ನಾಯ್ಕ ವಿದ್ಯಾರ್ಥಿಗಳು ಹಾಜರಿದ್ದರು.
ಶಿಕ್ಷಕ ಅಶೋಕ ಸ್ವಾಗತಿಸಿ, ಪತ್ರಕರ್ತ ವಿಶ್ವನಾಥ ಸಾಲ್ಕೋಡ ವಂದಿಸಿದರು.