ಏಳು ವರ್ಷಗಳಿಂದ ಒಂದೇ ರೀತಿಯ ಸಂಖ್ಯೆಯನ್ನು ಬಳಸಿಕೊಂಡು ಲಾಟರಿ ಖರೀದಿ ಮಾಡಿದ ಅಮೆರಿಕದ ವ್ಯಕ್ತಿಯೊಬ್ಬರಿಗೆ ಬಹುಮಾನ ಬಂದಿದೆ. ಇದರಿಂದ ಭಾರೀ ಮೊತ್ತದ ಬಹುಮಾನವನ್ನು ಅವರು ಪಡೆದುಕೊಂಡಿದ್ದಾರೆ. ಬಹುಮಾನ ಪಡೆದ ವ್ಯಕ್ತಿಯನ್ನು ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ಎಂದು ಗುರುತಿಸಲಾಗಿದ್ದು, ಅವರು ಎರಡು ಕಡೆ ಬೇರೆ ಬೇರೆ ಲಾಟರಿಯನ್ನು ಆಯ್ಕೆ ಮಾಡಿದ್ದು, ಇದೀಗ ಎರಡು ಕಡೆಯಲ್ಲೂ ಅವರಿಗೆ ಬಹುಮಾನ ಬಂದಿದೆ. ಶುಕ್ರವಾರ ನಡೆದ ‘ಲಕ್ಕಿ ಫಾರ್ ಲೈಫ್’ ಡ್ರಾದಲ್ಲಿ, ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ತಮ್ಮ ಕುಟುಂಬದ ಸದಸ್ಯರ ಜನ್ಮದಿನಾಂಕದ ಸಂಖ್ಯೆಯನ್ನು ಬಳಸಿಕೊಂಡು, ಲಾಟರಿಯನ್ನು ಆಯ್ಕೆ ಮಾಡಿದ್ದಾರೆ. ಇದೀಗ ವರ್ಷಕ್ಕೆ 25,000 ಡಾಲರ್ (₹ 2078243.75) ಎಂಬಂತೆ ಬಹುಮಾನ ಬಂದಿದೆ.
ಈ ಬಗ್ಗೆ ಮಾತನಾಡಿದ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಅವರು, ನಾನು ಪ್ರತಿದಿನ ಅದೇ ಸಂಖ್ಯೆಯ ಲಾಟರಿಯನ್ನು ಆಯ್ಕೆ ಮಾಡುತ್ತಿದ್ದೆ. ಯಾವುದೇ ಲಾಟರಿಯನ್ನು ಖರೀದಿ ಮಾಡಬೇಕಾದರೆ, ನನ್ನ ಕುಟುಂಬದ ಸದಸ್ಯರ ಜನ್ಮ ದಿನದ ಸಂಖ್ಯೆಗಳನ್ನು ಆಯ್ಕೆ ಮಾಡಿದ್ದೇನೆ. ಆದರೆ ಅದೆಷ್ಟೊ ಬಾರಿ ಇದರಿಂದ ಹಿನ್ನಡೆಯಾಗಿ, ನನ್ನ ನಂಬರ್ಗೆ ಲಾಟರಿ ಬರುತ್ತಿರಲಿಲ್ಲ. ಇದರಲ್ಲಿ ಏನೋ ಸಮಸ್ಯೆ ಇದೆ ಎಂದುಕೊಂಡಿದೆ ಎಂದು ನಗುತ್ತಾಳೆ ಹೇಳಿದ್ದಾರೆ.
ಉತ್ತರ ಕೆರೊಲಿನಾ ಶಿಕ್ಷಣ ಲಾಟರಿ ಪ್ರಕಾರ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಅವರು 2 ಡಾಲರ್ನ (₹166.31) ಮೊದಲ ಲಾಟರಿಯನ್ನು ವೆಸ್ಟ್ ಮೌಂಟೇನ್ ಸ್ಟ್ರೀಟ್‌ನಲ್ಲಿರುವ 1 ಸ್ಟಾಪ್‌ನಿಂದ ಖರೀದಿಸಿದ್ದಾರೆ. ಶುಕ್ರವಾರ ಡ್ರಾ ಮಾಡಲಾದ ಲಾಟರಿಯಲ್ಲಿ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಪಡೆದ ಸಂಖ್ಯೆಯ ಲಾಟರಿಗೆ ಬಹುಮಾನ ಬಂದಿದೆ. ಇನ್ನೊಂದು ಲಾಟರಿ ಹೈ ಪಾಯಿಂಟ್‌ನಲ್ಲಿರುವ ಈಸ್ಟ್‌ಚೆಸ್ಟರ್ ಡ್ರೈವ್‌ನಲ್ಲಿರುವ ಚಾರ್ಲಿಯ ಔಟ್‌ಲೆಟ್‌ನಿಂದ ಡ್ರಾ ಮಾಡಲಾಗಿದೆ. ಅದಕ್ಕೂ ಕೂಡ ಬಹುಮಾನ ಬಂದಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆಷ್ಟೇ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಈ ಹಣವನ್ನು ಹೇಗೆ ಬಳಸಬೇಕು ಎಂದು ಯೋಜನೆ ರೂಪಿಸುತ್ತಿದ್ದಾರೆ. ಈ ಹಣವನ್ನು ನನ್ನ ಮನೆಗಾಗಿ ಉಪಯೋಗ ಮಾಡಿಕೊಳ್ಳುವೇ ಎಂದು ಹೇಳಿದ್ದಾರೆ. ಇವರು ಸೋಮವಾರದಂದು ಲಾಟರಿಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಎರಡು ಆಯ್ಕೆಯನ್ನು ನೀಡಲಾಗಿತ್ತು. ವರ್ಷಕ್ಕೆ 25,000 ಡಾಲರ್ ಅಥವಾ ಒಮ್ಮೆಗೆ 390,000 ಡಾಲರ್ (₹32436105.00) ಮೊತ್ತವನ್ನು ಪಡೆಯುವ ಆಯ್ಕೆಯನ್ನು ನೀಡಲಾಗಿತ್ತು. ಆದರೆ ವಿನ್‌ಸ್ಟನ್-ಸೇಲಂನ ಪಾಲ್ ಕೌಡಿಲ್ ಅವರು 390,000 ಡಾಲರ್ನ ಒಟ್ಟು ಮೊತ್ತವನ್ನು ಆಯ್ಕೆ ಮಾಡಿದ್ದಾರೆ.