ನಾನು ಓರ್ವ ಹಿಂದೂವಾಗಿ ಇಲ್ಲಿಗೆ ಬಂದಿದ್ದೇನೆ, ಪ್ರಧಾನಿಯಾಗಿ ಅಲ್ಲ, ರಾಮಕಥೆಯಲ್ಲಿ ಪಾಲ್ಗೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾತು

‘ನಾನು ಪ್ರಧಾನಿಯಾಗಿ ಅಲ್ಲ, ಓರ್ವ ಹಿಂದೂ ಆಗಿ ಬಂದಿದ್ದೇನೆ’ ಎಂದು ಬ್ರಿಟನ್ ಪ್ರಧಾನಿ Rishi Sunak ಹೇಳಿದ್ದಾರೆ. ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಜೀಸಸ್ ಕಾಲೇಜಿನಲ್ಲಿ ನಡೆದ ರಾಮಕಥಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ರಿಷಿ ಸುನಕ್, ನಾನು ಇಂದು ಬ್ರಿಟನ್ ಪ್ರಧಾನಿಯಾಗಿ ಬಂದಿಲ್ಲ ಓರ್ವ ಹಿಂದೂವಾಗಿ ಬಂದಿದ್ದೇನೆ ಎಂದರು. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದೇ ರಾಮಕಥಾ ಕಾರ್ಯಕ್ರಮ ನಡೆಯಿತು. ನನ್ನ ನಂಬಿಕೆ ವೈಯಕ್ತಿಕವಾದದ್ದು, ಪ್ರಧಾನಿಯಾಗಿರುವುದು ದೊಡ್ಡ ಗೌರವವಾದರೂ ಈ ಹುದ್ದೆಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಕಠಿಣ ಆಯ್ಕೆಗಳನ್ನು ಮಾಡಬೇಕು, ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು.

ನನ್ನ ಧರ್ಮವು ನನಗೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ, ಯಾವುದೇ ಕೆಲಸವನ್ನು ಮಾಡುವ ಮೊದಲು ಸಮಸ್ಯೆಗಳನ್ನು ಆಲಿಸಿ, ಸಮಾಧಾನದಿಂದ ನಿರ್ಧಾರ ತೆಗೆದುಕೊಳ್ಳುವಂತೆ ನನ್ನ ಧರ್ಮವು ಹೇಳುತ್ತದೆ.

ನನ್ನ ಕಚೇರಿಯ ಮೇಜಿನ ಮೇಲೆ ಗಣೇಶ ಮೂರ್ತಿ ಇದೆ

ಮೊರಾರಿ ಬಾಪು ಅವರ ಆಸನದ ಹಿಂದೆ ಹನುಮಂತನ ವಿಗ್ರಹವನ್ನು ಹೇಗೆ ಇರಿಸಲಾಗಿದೆಯೋ ಅದೇ ರೀತಿ ಗಣೇಶನ ವಿಗ್ರಹವನ್ನು 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ನನ್ನ ಕಚೇರಿಯ ಮೇಜಿನ ಮೇಲೆ ಇರಿಸಲಾಗಿದೆ ಎಂದು ಬ್ರಿಟನ್ ಪ್ರಧಾನಿ ಸುನಕ್ ಹೇಳಿದ್ದಾರೆ.

ಸುನಕ್ ಅವರು ಬ್ರಿಟಿಷ್ ಚಾನ್ಸೆಲರ್ ಆಗಿದ್ದಾಗ (2020) ದೀಪಾವಳಿಯ ದಿನದಂದು ಅಧಿಕೃತ ನಿವಾಸವಾದ 11 ಡೌನಿಂಗ್ ಸ್ಟ್ರೀಟ್‌ನಲ್ಲಿ ಮೊದಲ ಬಾರಿಗೆ ದೀಪವನ್ನು ಬೆಳಗಿಸಿದ್ದೆ. ಪ್ರತಿಯೊಂದು ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ, ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಜನ್ಮಾಷ್ಟಮಿ ಆಚರಿಸಲು ನಾನು ನನ್ನ ಹೆಂಡತಿಯೊಂದಿಗೆ ಭಕ್ತಿ ವೇದಾಂತ ಮ್ಯಾನರ್ ದೇವಸ್ಥಾನಕ್ಕೆ ಹೋಗಿದ್ದೆವು ಎಂದರು.