ಸಂಚಾರ ನಿಯಮ ಉಲ್ಲಂಘಿಸಿ ಅಜಾಗರೂಕವಾಗಿ ವಾಹನ ಚಲಾಯಿಸಿದ್ದರಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆರಡು ಜೀವಗಳು ಬಲಿಯಾಗಿವೆ. ನಿನ್ನೆ(ಆಗಸ್ಟ್ 15) ರಾತ್ರಿ ಮಾರುತಿ ನಗರದಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದ ಅಪಘಾತದಲ್ಲಿ ನರಸಪ್ಪ (51) ಹಾಗೂ ರಕ್ಷಾ ಮೃತಪಟ್ಟಿದ್ದಾರೆ. ಕಿಡ್ ಕೇರ್ ನಲ್ಲಿ ಕೆಲಸಮಾಡುತ್ತಿರುವ ರಕ್ಷಾ ಹಾಗೂ ಕಾಲೇಜು ವಿದ್ಯಾರ್ಥಿ ಚಂದನ್ ಪಲ್ಸರ್ ಬೈಕ್ನಲ್ಲಿ ಮಾರುತಿ ನಗರದಿಂದ ಕೆಎಲ್‍ಇ ಕಾಲೇಜಿನೆಡೆಗೆ ವೇಗವಾಗಿ ಹೋಗುತ್ತಿದ್ದಾಗ ನರಸಪ್ಪ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನರಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರೆ, ತ್ರೀವೃವಾಗಿ ಗಾಯಗೊಂಡಿದ್ದ ರಕ್ಷಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ದುರಂತ ಅಂದರೆ ಮೃತ ರಕ್ಷಾ ಹೆಲ್ಮೆಟ್ ಹಾಕಿರಲಿಲ್ಲ
ಮೋಜು- ಮಸ್ತಿಗಾಗಿ ರಕ್ಷಾ ಹಾಗೂ ಚಂದನ್ ವೇಗವಾಗಿ ಬಂದಿದ್ದಲ್ಲದೆ, ಹೆಲ್ಮೆಟ್ ಧರಿಸದೆ ಸಂಚಾರ ನಿಯಮವನ್ನೂ ಪಾಲಿಸಿಲ್ಲ. ಮೃತ ದುರ್ದೈವಿ ನರಸಪ್ಪ ಸರ್ಕಾರಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು, ಹೆಲ್ಮೆಟ್ ಹಾಕಿಯೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಈ ಕುರಿತು ಕೆಂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ವಿಭಾಗದ ಟ್ರಾಫಿಕ್ ಡಿಸಿಪಿ ಸುಮನ ಪ್ರತಿಕ್ರಿಯೆ
ಇನ್ನು ಈ ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗದ ಟ್ರಾಫಿಕ್ ಡಿಸಿಪಿ ಸುಮನ ಡಿಪಿ ಪ್ರತಿಕ್ರಿಯಿಸಿದ್ದು, ನಿನ್ನೆ ಎರಡು ಬೈಕ್ ಗಳ ಮಧ್ಯೆ ಉಲ್ಲಾಳದ ಮಾರುತಿನಗರದಲ್ಲಿ ಅಪಘಾತವಾಗಿದೆ. ಚಂದನ್ ಎನ್ನುವವರ ಬೈಕ್ ಹಿಂಬದಿಯಲ್ಲಿ ರಕ್ಷಾ ಕುಳಿತುಕೊಂಡು ಪ್ರಯಾಣ ಪ್ರಯಾಣಿಸುತ್ತಿದ್ದರು. ಮತ್ತೊಂದೆಡೆ ನರಸಪ್ಪ ಎನ್ನುವರು ತಮ್ಮ ಬೈಕ್ ಟರ್ನಿಂಗ್ ತೆಗೆದುಕೊಳ್ಳುವಾಗ ಈ ಅಪಘಾತವಾಗಿದೆ ಎಂದರು.
ಪಲ್ಸರ್ ಬೈಕ್ನ ಅತಿವೇಗ ಹಾಗೂ ನಿರ್ಲಲಕ್ಷ್ಯದಿಂದ ಚಂದನ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ನರಸಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಕ್ಷಾ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಡ್ರೈವರ್ ಚಂದನ್ ಕುಡಿದು ಡ್ರೈವಿಂಗ್ ಮಾಡಿರುವ ಶಂಕೆ ಇದೆ. ಚಂದನ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಗುದ್ದಿದ ರಭಸಕ್ಕೆ 50 ಮೀಟರ್ ನಷ್ಟು ಉಜ್ಜಿಕೊಂಡು ಹೋಗಿದೆ. ಮೃತ ನರಸಪ್ಪ ಲೆಕ್ಟರರ್ ಆಗಿದ್ದರು. ಇನ್ನು ಚಂದನ್ ಜೊತೆಗಿದ್ದ ರಕ್ಷಾ ಕಿಂಡರ್ ಗಾರ್ಟನ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪಲ್ಸರ್ ಸವಾರ ಚಂದನ್ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.