ಜೋಯಿಡಾ : ಅಂಗನವಾಡಿ -1 ಕೇಂದ್ರಕ್ಕೆ ಖಾಯಂ ಕಾರ್ಯಕರ್ತೆಯ ನೇಮಕಕ್ಕೆ ಸ್ಥಳೀಯರಿಂದ ಮನವಿ

ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ಅಂಗನವಾಡಿ-1 ಕೇಂದ್ರದ ಅಂಗನವಾಡಿ ಶಿಕ್ಷಕಿ ನಿವೃತ್ತರಾಗಿ ಒಂದುವರೆ ತಿಂಗಳಾಗಿದ್ದು, ಸಧ್ಯಕ್ಕೆ ಸ್ಥಳೀಯ ಅಂಗನವಾಡಿ ಕೇಂದ್ರದ ಶಿಕ್ಷಕಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದರೂ ಅವರು ವಾರದಲ್ಲಿ ಎರಡು ದಿನ ಕರ್ತವ್ಯಕ್ಕೆ ಹಾಜರಾಗುತ್ತಿರುವುದರಿಂದ ಪುಟಾಣಿ ಮಕ್ಕಳ ಕಲಿಕೆಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಈ ಕೂಡಲೆ ಈ ಅಂಗನವಾಡಿ ಕೇಂದ್ರಕ್ಕೆ ಖಾಯಂ ಶಿಕ್ಷಕಿಯನ್ನು ನೇಮಕ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಇಂದು ಬುಧವಾರ ಬೆಳಿಗ್ಗೆ ಜೋಯಿಡಾ ತಾಲ್ಲೂಕು ಕೇಂದ್ರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶಾರದಾ ಮರಾಠೆಯವರಿಗೆ ಲಿಖಿತ ಮನವಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಭವಾನಿ ಚೌವ್ಹಾಣ್, ರೇಣುಕಾ ಮದನ್ ಮೋಹನ, ಸುಮೇಧಾ ನಾಯ್ಕ, ಶಿಲ್ಪಾ ಶಿವಾನಂದ, ಸಂದ್ಯಾ ಸಂದೀಪ್ ಮಾದರ, ಸುಪ್ರಿಯಾ ಗಾವಡಾ, ಪ್ರಿಯಾಂಕಾ ದೇಸಾಯಿ, ದಿವ್ಯಾ ಡಯಸ್, ನಮೀತಾ.ಎಸ್.ಕುಂಬಾರ್, ಶಬಾನಾ ಮುಜಾವರ್, ಅಶ್ವಿನಿ ಹರಿಜನ, ತುಳಸಿ ದಾಸ, ದೀಪಾ ಭಂಡಾರಿ, ನಂದಿನಿ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.