ಯಲ್ಲಾಪುರ; ಸಿದ್ದಿ ಬುಡಕಟ್ಟು ಜನಪರ ಸಂಘದ ವಾರ್ಷಿಕ ಸಭೆ ಬುಧವಾರ ಪಟ್ಟಣದಲ್ಲಿ ನಡೆಯಿತು.



ಯಲ್ಲಾಪುರ; ಸಂಘದ ರಾಜ್ಯಾಧ್ಯಕ್ಷ ಬೆನಿತ್ ಸಿದ್ದಿ ಮಾತನಾಡ “ಸಿದ್ದಿ ಸಮುದಾಯ ದವರಿಗೆ ಸರಕಾರದ ವಿವಿಧ ಸೌಲಭ್ಯಗಳು ಸಿಗುತ್ತಿದೆಯೋ ಇಲ್ಲವೋ ಎಂಬುದರ ಬಗೆಗೆ ಪರಿಶೀಲನೆ ನಡೆಸಬೇಕು. ಸೌಲಭ್ಯಗಳು ದುರ್ಬಳಕೆ ಆಗದೇ ಸಮುದಾಯದವರ ಏಳಿಗೆಗೆ ಪ್ರಾಮಾಣಿಕವಾಗಿ ಆಗುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.
ಸಮುದಾಯವರು ಎದುರಿಸುತ್ತಿರುವ ಅತಿಕ್ರಮಣ ಸಮಸ್ಯೆ ಪರಿಹಾರಕ್ಕೆ ಸಂಘಟನೆಯಿಂದ ಪ್ರಯತ್ನ ಆಗಬೇಕಿದೆ. ಸಮಯದ ಜನರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವುದು ಮತ್ತು ಸಂಘಟನೆ ಬಲಪಡಿಸಿ ಹೊಸ ಸದಸ್ಯರನ್ನು ಸೇರಿಸಿ ಕೊಳ್ಳುವುದು,ಗ್ರಾ.ಪಂ ಪ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿ ರಚನೆಗೆ ಸಂಘ ನಿರ್ಧರಿಸಿತು. ರಾಜ್ಯ ಗೌರವಾಧ್ಯಕ್ಷ ಜೋನ್ ಸಿದ್ದಿ,ಉಪಾಧ್ಯಕ್ಷ ಅಲ್ಲಾಭಕ್ಷ ಸಿದ್ದಿ ಹಳಿಯಾಳ, ಸಂಘಟನಾ ಕಾರ್ಯದರ್ಶಿಗಳಾದ ಮನವೇಲ್ ಸಿದ್ದಿ, ಮೌಲಲಿ ಅಜಗಾಂಕರ್,ಹಳಿಯಾಳ ಕಾರ್ಯದರ್ಶಿ ಎಸ್.ಜಿ.ಭಿಳ್ಕಿಕರ್,ಜಿಲ್ಲಾ ಉಪಾಧ್ಯಕ್ಷ ಶರೀಪ ಸಿದ್ದಿ,ಕಾರ್ಯದರ್ಶಿ ಮೇರಿ ಗರಿಬಾಚೆ‌ ಮುಂತಾದವರು ಭಾಗವಹಿಸಿದ್ದರು.