ಕೋಗಿಲಬನ-ಬಡಕಾನಶಿರಡಾ ಗ್ರಾ.ಪಂ ಅಧ್ಯಕ್ಷರಾಗಿ ಪಾರ್ವತಿ, ಉಪಾಧ್ಯಕ್ಷರಾಗಿ ಮಂಜುಳಾ ಅವಿರೋಧ ಆಯ್ಕೆ

ದಾಂಡೇಲಿ : ತಾಲ್ಲೂಕಿನ ಕೋಗಿಲಬನ-ಬಡಕಾನಶಿರಡಾ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಾರ್ವತಿ ಹರಿಜನ ಮತ್ತು ಉಪಾಧ್ಯಕ್ಷೆಯಾಗಿ ಮಂಜುಳಾ ರಜಪೂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೋಗಿಲಬನದಲ್ಲಿರುವ ಗ್ರಾಮ ಪಂಚಾಯ್ತು ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಬುಧವಾರ ಚುನಾವಣಾಧಿಕಾರಿ ಎನ್.ವಿ.ಪಾಟೀಲ್ ಅವರ ನೇತೃತ್ವದಲ್ಲಿ ಜರುಗಿತು. ಒಟ್ಟು 7 ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಅವಿರೋಧವಾಗಿ ನಡೆಯಿತು.