ದಾಂಡೇಲಿ : ನಾನು ಓದು ಬರಹ ಕಲಿತವಳಲ್ಲ. ಆದರೆ ಗಿಡಗಳನ್ನು ನೆಡುವುದು ನನ್ನ ಮುಖ್ಯ ಕಾಯಕ. ಮರ ಗಿಡಗಳನ್ನು ಬೆಳೆಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಹೆಣ್ಣು ಗಂಡು ಎಂಬ ಬೇಧವಿಲ್ಲದೇ ಎಲ್ಲರು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಕರಾಗಬೇಕು. ಗಿಡಗಳನ್ನು ನೆಡುವುದಷ್ಟೆ ನಮ್ಮ ಕೆಲಸವಲ್ಲ, ನೆಟ್ಟ ಗಿಡಗಳನ್ನು ಉಳಿಸುವುದು ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ಮರ ಗಿಡಗಳನ್ನು ಹೆಚ್ಚು ಹೆಚ್ಚು ಪ್ರೀತಿಸಿ ಬೆಳೆಸಿದಾಗ ಅವು ನಮ್ಮನ್ನು ಸದಾ ರಕ್ಷಿಸುತ್ತದೆ ಎಂದು ವೃಕ್ಷಮಾತೆ ಹಾಗೂ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವೆರು ಹೇಳಿದರು.
ಅವರು ಇಂದು ಮಂಗಳವಾರ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು.