ಮಂಜು ಕರಾಟೆ ಸ್ಕೂಲ್ ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಪ್ರಧಾನ

ಹಳಿಯಾಳ : ತಾಲ್ಲೂಕಿನ ಹೆಸರಾಂತ ಕರಾಟೆ ತರಬೇತಿ ಕೇಂದ್ರ ಹಾಗೂ ನ್ಯಾಯವಾದಿ ಮತ್ತು ಕರಾಟೆ ಗುರು ಮಂಜುನಾಥ ಮಾದರ ಅವರ ಪ್ರವರ್ತನೆಯ ಮಂಜು ಕರಾಟೆ ಕೇಂದ್ರದಲ್ಲಿ ಕೇಂದ್ರದ ಬ್ಲ್ಯಾಕ್ ಬೆಲ್ಟ್ ಪಡೆದ ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಪ್ರಧಾನ ಮಾಡಲಾಯ್ತು.

ಮುಖ್ಯ ಅತಿಥಿಗಳಾಗಿ ಎಂ.ಸಿ.ನಿಂಗನಗೌಡ್ರು, ಧರಣೇಂದ್ರ ಆಚಾರಿ, ಕೃಷ್ಣಪ್ಪ ಕಟ್ಟಿ ಮೊದಲಾದವರು ಭಾಗವಹಿಸಿ ಮಂಜು‌ ಕರಾಟೆ ಶಾಲೆಯ ಸಾಧನೆಯನ್ನು ಕೊಂಡಾಡಿದರು. ಸದಾ ಒಂದಿಲ್ಲವೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಂಜುನಾಥ ಮಾದರ ಅವರು ನಾಡು ಕಟ್ಟುವ ಕಾರ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ ಎಂದು ಹೇಳಿ, ಆರೋಗ್ಯ ವರ್ಧನೆ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕರಾಟೆ ಪರಿಣಾಮಕಾರಿಯಾಗಿದೆ. ಕರಾಟೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡುವಂತಾಗಲೆಂದು ಶುಭವನ್ನು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಮುನವಳ್ಳಿ, ಮಾರುತಿ ಸಾಳಂಕೆ, ಜಾನಕರ್ ಬೆಂಚೆಕರ್, ಸುರೇಶ್ ಚಲವಾದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕರಾಟೆ ವಿದ್ಯಾರ್ಥಿಗಳಾದ ಭೂಮಿಕಾ ಗರಗ, ಅಕ್ಷತಾ ಅಂಗ್ರೋಳ್ಳಿ, ವಿನಾಯಕ ಬುಜಿ ಇವರಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ಪ್ರಧಾನ ಮಾಡಲಾಯ್ತು.

ಕರಾಟೆ ಗುರು ಮಂಜುನಾಥ ಮಾದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ಹಾದಿಯನ್ನು ವಿವರಿಸಿ, ಸಹಕರಿಸಿ, ಪ್ರೋತ್ಸಾಹಿಸಿ, ಬೆಳೆಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಗಾಯಕ ಬಸವರಾಜ ಹುಕ್ಕೇರಿ ಅವರು ಪ್ರಾರ್ಥನೆ ಗೀತೆ ಹಾಡಿದರು.‌ ತನ್ವಿ ಧಾರವಾಡಕರ ಸ್ವಾಗತಿಸಿದರು. ಶರಧಿ ಉಡುಪಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.