ದಾಂಡೇಲಿ : ನಗರದ ಕರ್ನಾಟಕ ಸಂಘದ ಪಂಚಗಾನ ಸಭಾ ಭವನದಲ್ಲಿ ಆ.6 ರವಿವಾರರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಹುಬ್ಬಳಿಯ ವಿಹಾನ ಹಾರ್ಟ್ ಕೇಂದ್ರ ಸೆಂಟರ್ ಹಾಗೂ ಡಾ. ಜಿ.ವಿ ಭಟ್ ಹಾಸ್ಪಿಟಲ್ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ನಗರದಲ್ಲಿ ಇಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿಯ ವಿಹಾನ ಹಾರ್ಟ್ ಕೇರ್ ಸೆಂಟರಿನ ಸಂಯೋಜಕ ಕೇಶವ ರಂಗಾಪೂರ ವರು ಶಿಬಿರ ಕುರಿತು ಮಾತನಾಡಿ ಶಿಬಿರದಲ್ಲಿ ಉಚಿತವಾಗಿ ಬಿಪಿ, ಇಸಿಜಿ, 2ಡಿ ಇಕೋ ತಪಾಸಣೆಯೊಂದಿಗೆ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಗುವದು ಎಂದರು.
ಹೃದಯ ರೋಗ ಕೆಲವು ಬಾರಿ ಲಕ್ಷಣದೊಂದಿಗೆ ಗುರುತಿಸಿಕೊಳ್ಳಬಹುದು ಕೆಲವು ಬಾರಿ ಲಕ್ಷಣಗಳಿಲ್ಲದೆ ಹೃದಯಘಾತದ ಸಂಭವ ಇರುತ್ತದೆ ಆದ್ದರಿಂದ ಸಾಮಾನ್ಯವಾಗಿ 40 ವರ್ಷ ದಾಟಿದವರು ಮುಂಜಾಗ್ರತಾ ಕ್ರಮವಾಗಿ ಆರೋಗ್ಯದ ದೃಷ್ಠಿಯಿಂದ ಇಂತಹ ಶಿಬಿರದಲ್ಲಿ ಭಾಗವಹಿಸಿ ತಪಾಸಣೆಯೊಂದಿಗೆ ಎಚ್ಚರಿಕೆ ವಹಿಸುವದು ಇಂದಿನ ದಿನಮಾನಗಳಲ್ಲಿ ಅತೀ ಅವಶ್ಯವಾಗಿದೆ ಎಂದು ನಗರದ ಖ್ಯಾತ ಹೃದಯ ರೋಗ ತಜ್ಞ ಡಾ. ಜಿ,ವಿ ಭಟ್ ತಿಳಿಸಿದರು.
ಕ್ಯಾಬಿನೆಟ್ ಸದಸ್ಯ ಯು.ಎಸ್ ಪಾಟೀಲ ಅವರು ಉಚಿತ ಶಿಬಿರದ ಲಾಭವನ್ನು ದಾಂಡೇಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬಿನ ಅಧ್ಯಕ್ಷ ವೀರೇಶ ಯರಗೇರಿ, ನಿಕಟಪೂರ್ವ ಅಧ್ಯಕ್ಷ ಸೈಯ್ಯದ್ ತಂಗಳ್, ಖಜಾಂಚಿ ಇಮ್ತಿಯಾಜ್ ಎಂ. ಅತ್ತಾರ, ಪ್ರಮುಖರಾದ ರಮೇಶ ಉಪಸ್ಥಿತರಿದ್ದರು.