ಭಟ್ಕಳ : ಅಕ್ಷರವನ್ನು ಗ್ರಹಿಸಿದವನಿಗೆ ಎಲ್ಲವು ಲಭಿಸಲಿದೆ ಕಟು ಸತ್ಯ. ಒಂದು ಸಮುದಾಯವು ಅಭಿವೃದ್ಧಿಯಾಗಿದೆ ಎಂದರೆ ಶಿಕ್ಷಣದಿಂದ ಆಗಿದೆ ಎಂಬುದು ಸಾರ್ವಕಾಲಿಕ ಸತ್ಯ ಎಂದು
ಸರಕಾರಿ ಪದವಿಪೂರ್ವ ಕಾಲೇಜು ಸರ್ಪನಕಟ್ಟೆ ಹಡೀನ ಪ್ರಾಂಶುಪಾಲ ಗಜಾನನ ನಾಯ್ಕ ಅವರು ಹೇಳಿದರು.
ಅವರು ಇಲ್ಲಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ನಾಮಧಾರಿ ಸಮಾಜದ ಗುರುಮಠ ಇವರಿಂದ ನಡೆಸಲಾದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಈ ಹಿಂದೆ 20 ವರ್ಷಗಳ ಕಾಲ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ಅಲ್ಲಿ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡುತ್ತಲಿದ್ದಾರೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಜಿಲ್ಲೆಯ ಜನರು ಸಾಧನೆ ಮಾಡುತ್ತಿದ್ದಾರೆ. ಇದು ಅವರು ಅವರ ಸಮುದಾಯಕ್ಕೆ ಮಾಡುತ್ತಿರುವ ಕರ್ತವ್ಯ ವಾಗಿದೆ.
ಇನ್ನು ನಮ್ಮ ಸಮುದಾಯವು ಸಂಖ್ಯೆಯಲ್ಲಿ ಬಲಾಡ್ಯವೇ ಆಗಿದ್ದು ಆದರೆ ಶೈಕ್ಷಣಿಕವಾಗಿ ಗುರುತಿಸಿಕೊಂಡಿಲ್ಲವಾಗಿದೆ. ಶೈಕ್ಷಣಿಕ ಕಾಳಜಿಯನ್ನು ಜನರಿಗೆ ತಲುಪಿಸುವಲ್ಲಿ ನಾವು ಮುಂಚೂಣಿಗೆ ಬರಬೇಕು ಆಗ ಮಾತ್ರ ಪಕ್ಕದ ಜಿಲ್ಲೆಯ ರೀತಿಯಲ್ಲಿ ನಮ್ಮ ಜಿಲ್ಲೆ ತಾಲೂಕು ಅಭಿವೃದ್ಧಿ ಯಾಗಲಿದೆ. ಪ್ರತಿಭೆ ಎಲ್ಲರಲ್ಲಿಯೂ ಇದೆ ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಕೆಲಸ ಸಮುದಾಯದಾಗಿದೆ. ವಿದ್ಯಾರ್ಥಿಗಳಿಗೆ ಅವರ ಗುರಿಯ ಬಗ್ಗೆ ನಿರಂತರ ಆಲೋಚನೆ ಇದ್ದರೆ ಮಾತ್ರ ಸಾಧನೆಯ ಜೊತೆಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗಲಿದೆ.
ಸಮಾಜದಲ್ಲಿನ ಟೀಕೆ ಟಿಪ್ಪಣಿಗೆ ಯಾರು ತಲೆ ಕೆಡಿಸಿಕೊಳ್ಳದೇ ಸಕಾರಾತ್ಮಕ ಅಂಶವನ್ನು ಗ್ರಹಿಸಿ ಅದರಿಂದ ವಿದ್ಯಾಭ್ಯಾಸದ ಏಳಿಗೆಯತ್ತ ಶ್ರಮಿಸಬೇಕು ಎಂದರು.
ಅಂತರರಾಷ್ಟ್ರೀಯ ಪ್ಯಾರ ಬ್ಯಾಡ್ಮಿಂಟನ್ ಆಟಗಾರ ಶಿರಾಲಿ ಚಿತ್ರಾಪುರದ ಮಂಜುನಾಥ ಜೆ. ನಾಯ್ಕ ‘ ವಿದ್ಯೆಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕವಾಗಿಯೂ ಮಕ್ಕಳು ಏಳಿಗೆಯಾಗಲಿದ್ದಾರೆ.
ಸಮಾಜದಲ್ಲಿ ಖಾಸಗಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರೆ ಮಾತ್ರ ಅವರ ಸರ್ವತೋಮುಖ ಅಭಿವೃದ್ಧಿಯಾಗಲಿದ್ದಾರೆಂಬ ತಪ್ಪು ಕಲ್ಪನೆ ಇದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳೇ ಸಮಾಜದಲ್ಲಿ ಉನ್ನತ ಮಟ್ಟದ ಸಾಧನೆಯನ್ನು ಮಾಡಿದ್ದಾರೆ. ಸದ್ಯ ನನ್ನ ಆಸೆ ಪ್ಯಾರಾ ಒಲಿಂಪಿಕ್ ನಲ್ಲಿ ದೇಶವನ್ನು ಪ್ರತಿನಿಧಿಸಿಸುವ ಗುರಿ ಇದ್ದು ಎಲ್ಲರ ಸಹಕಾರ ಬೇಕಾಗಿದೆ ಎಂದರು.
ನಾಮಧಾರಿ ಸಮಾಜದ ಗುರುಮಠ ಭಟ್ಕಳದ ಗೌರವಾಧ್ಯಕ್ಷ ಎಂ.ಆರ್. ನಾಯ್ಕ ಮಾತನಾಡಿದರು.
ನಾಮಧಾರಿ ಸಮಾಜದ ಗುರುಮಠದ ಉಪಾಧ್ಯಕ್ಷ ಭವಾನಿ ಶಂಕರ ನಾಯ್ಕ ‘ ಸಮುದಾಯದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಇದ್ದು ಕುಟುಂಬ ತೀರಾ ಬಡವರಿದ್ದಲ್ಲಿ ಈ ಹಿನ್ನೆಲೆಯಲ್ಲಿ ಸಮಾಜದಿಂದ ಶೈಕ್ಷಣಿಕ ನಿಧಿ ಆರಂಭಿಸಿದ್ದೇವೆ. ಇದಕ್ಕೆ ದಿನಕ್ಕೆ ಒಂದು ರೂ. ದಂತೆ ಹಣವನ್ನು ದೇಣಿಗೆ ನೀಡಿದ್ದಲ್ಲಿ ಶೈಕ್ಷಣಿಕ ಬಲ ಸಿಗಲಿದೆ. ಇನ್ನು ನಮ್ಮ ಸಮಾಜದ ಆರ್ಥಿಕ, ಸಾಮಾಜಿಕ ಬಲ ತುಂಬಲು ಸಹಾಯವಾಣಿಯನ್ನು ಆರಂಭಿಸಿದ್ದು, ಮೊಬೈಲ ನಂಬರ 7338383822 ಕರೆ ಮಾಡಿ ನಿಮ್ಮ ಕಷ್ಟ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ ಎಂದರು.
ನಾಮಧಾರಿ ಸಮಾಜದ ಗುರುಮಠ ಅಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ ಮಾತನಾಡಿ ‘ ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ಹಾಗೂ ಸನ್ಮಾನ ಮಾಡುತ್ತಿರುವ ಉದ್ದೇಶವೆನೆಂದರೆ ಮುಂದಿನ ನಮ್ಮ ಸಮಾಜದ ಆಸ್ತಿ ಇವರಾಗಿದ್ದಾರೆ. ನಮ್ಮ ಕಲಿಕೆಯ ಅವಧಿಯಲ್ಲಿ ಈ ರೀತಿಯ ಬೆಂಬಲ ಇಲ್ಲದೇ ಕಷ್ಟದಲ್ಲಿ ಶಿಕ್ಷಣ ಪಡೆದುಕೊಂಡಿದ್ದೇವೆ ಈ ಪರಿಸ್ಥಿತಿ ನಮ್ಮ ಮಕ್ಕಳಿಗೆ ಬರಬಾರದು ಎಂಬುದಾಗಿದೆ.
ಇನ್ನು ನಮ್ಮ ಮಕ್ಕಳಲ್ಲಿ ಸಂಬಂಧಗಳ ಬೆಲೆ ಅದರ ಅಗತ್ಯತೆಯನ್ನು ಕಲಿಸಬೇಕಾದ ಜವಾಬ್ದಾರಿ ಪಾಲಕರದ್ದಾಗಿದೆ. ಕಾರಣ ಸಂಬಂಧಗಳ ಬೆಲೆ ಇತ್ತೀಚಿನ ದಿನದಲ್ಲಿ ಕಡಿಮೆಯಾಗುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದ ಅವರು ಸಮಾಜದ ದೇವಾಲಯಕ್ಕೆ ದಿನವು ಭೇಟಿ ನೀಡಿ ದೇವರಲ್ಲಿ ಪೂಜಿಸುವ ಕೆಲಸ ಮಾಡಬೇಕು ಎಂದರು.
ನಾಮಧಾರಿ ಸಮಾಜದ ಪ್ರಧಾನ ಕಾರ್ಯದರ್ಶಿ ಮಾಸ್ತಿ ನಾಯ್ಕ
ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಂಗಾಧರ ನಾಯ್ಕ ಹಾಗೂ ನಾರಾಯಣ ನಾಯ್ಕ ಇವರು ನಿರೂಪಣೆ ಮಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ನಾಮಧಾರಿ ಸಮಾಜದ ಪ್ರಧಾನ ಕಾರ್ಯದರ್ಶಿ ಮಾಸ್ತಿ ನಾಯ್ಕ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನಾಮಧಾರಿ ಸಮಾಜದ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಶಿಕ್ಷಣದಲ್ಲಿ ಅತ್ಯಧಿಕ ಅಂಕ ಪಡೆದ 146 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.