ಜುಲೈ :31 ರಿಂದ ಆ:06 ರವರೆಗೆ ದಾಂಡೇಲಿಯಲ್ಲಿ ಉಚಿತ ಅಕ್ಯೂಪ್ರೆಶರ್ ಮತ್ತು ಸುಜೋಕ ಥೆರಪಿ ಚಿಕಿತ್ಸಾ ಶಿಬಿರ

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮತ್ತು ರೋಟರಿ ಕ್ಲಬ್ ದಾಂಡೇಲಿ ಇವರ ಸಂಯುಕ್ತಾಶ್ರಯದಡಿ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಜುಲೈ: 30 ರಿಂದ ಆ:06 ರವರೆಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವೆರೆಗೆ ಉಚಿತ ಅಕ್ಯೂಪ್ರೆಶರ್ ಮತ್ತು ಸುಜೋಕ ಥೆರಪಿ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆಯೆಂದು ರೊಟರಿ ಕ್ಲಬಿನ ಸಮುದಾಯ ಸೇವೆ ವಿಭಾಗದ ನಿರ್ದೇಶಕರಾದ ಆರ್.ಪಿ.ನಾಯ್ಕ ಅವರು ಹೇಳಿದರು.

ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿ ಶಿಬಿರದ ಬಗ್ಗೆ ವಿವರಣೆ ನೀಡಿದರು. ರಾಜಸ್ಥಾನದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ಇಲ್ಲಿಯ ಥೆರಪಿಸ್ಟ್ ಡಾ.ಭೊಪೇಂದ್ರ ಚೌಧರಿ ಹಾಗೂ ತಂಡದವರಿಂದ ಈ ಶಿಬಿರ ನಡೆಯಲಿದೆ.

ಈ ಅಕ್ಯೂಪ್ರೆಶರ್ ಚಿಕಿತ್ಸಾ ಪದ್ಧತಿಯಿಂದ ದೇಹದ ಅತಿಭಾರ, ಡಯಾಬಿಟಿಸ್, ಅರ್ಧ ತಲೆನೋವು,ಕೀಲು ನೋವು, ಸಂಧಿವಾತ, ಪಿತ್ತವಾತ, ಬೆನ್ನು ಹುರಿ ನೋವು, ಮೊಣಕಾಲು ನೋವು, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ, ರಕ್ತದೊತ್ತಡ, ಅಜೀರ್ಣ, ಮಲಬದ್ದತೆ ಮೊದಲಾದ ಕಾಯಿಲೆಗಳನ್ನು ನಿವಾರಣೆ ಮಾಡಬಹುದಾಗಿದ್ದು, ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಆರ್.ಪಿ.ನಾಯ್ಕ ಅವರು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬಿನ ಕಾರ್ಯದರ್ಶಿ ಅಶುತೋಷ್ ಕುಮಾರ್ ರಾಯ್ ಮತ್ತು ರೋಟರಿ ಕ್ಲಬಿನ ಇವೆಂಟ್ ಚೆರಮೆನ್ ಲಿಯೋ ಪಿಂಟೋ ಉಪಸ್ಥಿತರಿದ್ದರು.