ದಾಂಡೇಲಿಯ ವಿನಾಯಕ ನಗರದಲ್ಲಿ ಮೊಹರಂ ಸಂಭ್ರಮ

ದಾಂಡೇಲಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಪಂಜಾ ಮೆರವಣಿಗೆಯೊಂದಿಗೆ ಸಂಭ್ರಮ ಸಡಗರದಿಂದ ನಗರದ ವಿನಾಯಕ ನಗರದಲ್ಲಿ ಇಂದು ಆಚರಿಸಲಾಯಿತು.

ಐದು ದಿನಗಳ ಕಾಲ ಪ್ರತಿಷ್ಟಾಪನೆ ಮಾಡಿರುವ ಪಂಜಾಗಳನ್ನು ಶುಕ್ರವಾರ ರಾತ್ರಿ ಕತ್ತಲ್ ರಾತ್ರಿ ಆಚರಣೆಯಲ್ಲಿ ಊರು ಪ್ರದಕ್ಷಿಣೆ ಹಾಕಿ ಬೆಂಕಿ ಹಾಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರು ತಮ್ಮ ಹರಿಕೆಗಳನ್ನು ತೀರಿಸಿದರು. ಶನಿವಾರ ಬೆಳಗಿನ ಜಾವಕ್ಕೆ ಹೊರಟ ಪಂಜಾ ಮತ್ತೆ ಮಸೀದಿಗೆ ಬಂದು ಪ್ರದಕ್ಷಿಣೆ ಹಾಕಿ ಸ್ವಸ್ಥಾನಕ್ಕೆ ಮರಳಿದವು.

ಇಙದು ಮೊಹರಂ ಕೊನೆಯ ದಿನ ಆಚರಣೆ ನಿಮಿತ್ತ ‘ದೇವರು ಹೊಳೆಗೆ’ ಹೋಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೊಹರಂ ಕಮಿಟಿ ಅಧ್ಯಕ್ಷ ಇಕ್ಬಾಲ್ ದೇಸೂರು, ಪ್ರಮುಖರಾದ ಅಬ್ದುಲ್ ಖಾದರ್ ಮುಜಾವರ, ಇಮ್ರಾನ್,ಸಲೀಂ, ರಫೀಕ್ ಹುದ್ದಾರ, ಕಮಾಲ್, ಜಾದವ್,ಆದಂ, ಇರ್ಫಾನ್, ಫೈಜಾನ್, ಮುಜಾವರ ಇಬ್ರಾಹಿಮ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.