ಹಳಿಯಾಳ : ತಾಲ್ಲೂಕಿನ ಬಸವಳ್ಳಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯ್ತು.
ಐದು ದಿನಗಳವರೆಗೆ ಪಂಜಾಗಳನ್ನು ಪ್ರತಿಷ್ಟಾಪಿಸಿ ವಿವಿಧ ಪ್ರಕಾರಗಳಲ್ಲಿ ಆರಾಧನೆ ಮಾಡಲಾಗುತ್ತದೆ. ಪ್ರತಿದಿನವು ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿತ್ತು. ಇಂದು ಮೊಹರಂ ಅಂತಿಮ ದಿನದ ಆಚರಣೆಯನ್ನು ಮೆರವಣಿಗೆಯ ಮೂಲಕ ಸಂಭ್ರಮ, ಸಡಗರದಿಂದ ಆಚರಿಸಲಾಯ್ತು. ಮೊಹರಂ ಕಮೀಟಿಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮಿಯರು ಭಾಗವಹಿಸಿ, ಭಾವೈಕ್ಯತೆಯನ್ನು ಮರೆದರು.