ಪಿಕ್ ಅಪ್ ಹಾಗೂ ಆಟೋ ನಡುವೆ ಅಪಘಾತ -ಆಟೋ ಸವಾರರಿಬ್ಬರಿಗೆ ಗಂಭೀರ ಗಾಯ

ಸಿದ್ದಾಪುರ : ಪಿಕ್ ಅಪ್ ಹಾಗೂ ಆಟೋ ನಡುವೆ ಅಪಘಾತ ಸಂಭವಹಿಸಿ ಆಟೋ ಸವಾರರಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಹಲಗೇರಿ ಸಮೀಪದ ಕುಂಬಾರಕುಳಿಯಲ್ಲಿ ನಡೆದಿದೆ
ಸಿದ್ದಾಪುರ ಕಡೆಯಿಂದ ಜೋಗ ಕಡೆಗೆ ಹೋಗುತ್ತಿದ್ದ ಆಟೋ ಕ್ಕೆ ನಾಯಿ ಅಡ್ಡ ಬಂದು ನಾಯಿ ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ
ಒಂದೇ ಕುಟುಂಬದ ಮೂವರು (ತಂದೆ ತಾಯಿ ಮಗ) ಪ್ರಯಾಣಿಸುತ್ತಿದ್ದರು ತಾಯಿ ಹಾಗೂ ಮಗನಿಗೆ ಕಾಲು ತಲೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ

ಘಟನಾ ಸ್ಥಳಕ್ಕೆ 108 ವಾಹನದ ಸಿಬ್ಬಂದಿಗಳಾದ ಧರ್ಮರಾಜ್, ರೀತಿಷ್ ಭೇಟಿ ನೀಡಿ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಾಸಿದ್ದಾರೆ
ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ಗೆ ಒಯ್ಯಲಾಗಿದೆ ಎಂದು ತಿಳಿದುಬಂದಿದೆ
ಘಟನೆ ಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ