ಕುಮಟಾ : ಕಳೆದ 3-4 ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಳ್ಳ, ಕೊಳ್ಳಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ಸಮಸ್ಯೆ ಒಂದೆಡೆಯಾದರೆ, ಕುಮಟಾ ಹೊಸ ಬಸ್ ನಿಲ್ದಾಣದ ಸೋರುವುದರ ಜೊತೆಗೆ ಮುಂಬಾಗದ ರಸ್ತೆ ಹೊಂಡಮಯವಾಗಿ ನೀರು ತುಂಬಿಕೊಂಡು ಓಡಾಟ ಕಷ್ಟವಾಗಿರುವ ಅವಸ್ಥೆ ಮತ್ತೊಂದೆಡೆ.
ಕುಮಟಾ ಹೊಸ ಬಸ್ ನಿಲ್ದಾಣ ನಿರಂತರ ಸೋರುತ್ತಿರುವುದರಿಂದ ಬಸ್ ನಿಲ್ದಾಣದ ಒಳಗೆ ನೀರು ತುಂಬಿಕೊಳ್ಳುತ್ತಿದ್ದು, ಮಳೆ ಹೀಗೆ ವ್ಯಾಪಕವಾಗಿ ಮುಂದುವರೆದರೆ, ಜನರು ಬಸ್ ನಿಲ್ದಾಣದಲ್ಲಿ ನಿಂತುಕೊಳ್ಳಲು ಪರದಾಡುವ ಪರಿಸ್ಥಿತಿ ಖಂಡಿತ ಎದುರಾಗುವುದು. ಕುಮಟಾದ ಈ ಹೊಸ ಬಸ್ ನಿಲ್ದಾಣ, ನೋಡಲು ಗಟ್ಟಿ ಮುಟ್ಟಾಗೇನೋ ಕಾಣಿಸುತ್ತದೆ. ಆದರೆ ಹೀಗೆ ಮಳೆಯ ಅಬ್ಬರ ಮುಂದುವರೆದು ನಿರಂತರ ಸೋರಲುತೊಡಗಿದರೆ ಕಟ್ಟಡಕ್ಕೆ ಧಕ್ಕೆಯಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ..
ಇದೊಂದು ರೀತಿಯ ಸಮಸ್ಯೆಯಾದರೆ, ನಿಲ್ದಾಣದ ಮುಂಬಾಗದ ರಸ್ತೆ ಸಂಪೂರ್ಣ ಹಾಳಾಗಿದೆ.. ರಸ್ತೆಯ ತುಂಬಾ ಹೊಂಡಗಳದ್ದೇ ದರ್ಬಾರು. ಆ ಹೊಂಡಗಳಲ್ಲಿ ನೀರು ತುಂಬಿ ಬಸ್ ಮಾತ್ರವಲ್ಲ, ಜನರೂ ಓಡಾಡುವುದು ಕಷ್ಟವಾಗುತ್ತಿದೆ. ಅಲ್ಲಿ ರಸ್ತೆ ದುರಸ್ತಿ ಮಾಡಲು ತಿಂಗಳ ಮುಂಚೆಯೇ “ಕಾಮಗಾರಿ ಪ್ರಗತಿಯಲ್ಲಿದೆ” ಎಂಬ ಬೋರ್ಡ ಹಾಕಿ, ಇಂದಿಗೂ ಕನಿಷ್ಟ ಕಾಮಗಾರಿಯನ್ನೂ ಮಾಡಿಲ್ಲ.. ಇದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ತಕ್ಷಣ ಲಕ್ಷ್ಯ ವಹಿಸದೇ ಹೋದಲ್ಲಿ ಮುಂದಾಗುವ ಹಾನಿಗೆ ಅವರೇ ಜವಾಬ್ಧಾರರಾಗಬೇಕಾಗುತ್ತದೆ..