ಸಿದ್ದಾಪುರ : ಕಳೆದ ಒಂದು ವಾರದಿಂದ ತಾಲೂಕಿನಾದ್ಯoತ ನಿರಂತರ ಮಳೆ ಸುರಿದಿದ್ದು ಪರಿಣಾಮ ಹೊಳೆಗಳು ನದಿಗಳು ತುಂಬಿ ಹರಿಯುತ್ತಿವೆ ಅದರಲ್ಲೂ ಅಘನಾಶಿನಿ ನದಿ ತುಂಬಿ ಬಳಕುತ್ತ ವಯ್ಯಾರದಿಂದ ಹರಿಯುತ್ತ ಜನರನ್ನು ಆಕರ್ಷಸುತ್ತಿದೆ ಸುರಿಯುತ್ತಿರುವ ಮಳೆಯ ನಡುವೆಯೂ ಜನರು ಅಲ್ಲಲ್ಲಿ ನಿಂತು ಅಚ್ಚರಿಯಾಗಿ ವೀಕ್ಷಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ
ಈ ನದಿಯಿಂದ ಧುಮುಕುವ ಉಂಚಳ್ಳಿ ಜಲಪಾತದ ಸೊಬಗನ್ನು ಪ್ರವಾಸಿಗರು ಪರಿಸರ ಪ್ರಿಯರು ಕಣ್ ತುಂಬಿ ಕೊಳ್ಳುತ್ತಿದ್ದಾರೆ ಉಂಚಳ್ಳಿ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ
ಜಲಪಾತವನ್ನು ವೀಕ್ಷಿಸಿದ ಪ್ರವಾಸಿಗರು ಸಂತಸದಿಂದ ಮಿತಿ ಇಲ್ಲದoತೆ ಸಂಭ್ರಮಿಸುತ್ತಿದ್ದಾರೆ