KRS ಡ್ಯಾಂ 3 ಅಡಿ ಭರ್ತಿ – 29,552 ಕ್ಯೂಸೆಕ್ ನೀರು ಒಳಹರಿವು

ಮಂಡ್ಯ: ಕೆಲ ದಿನಗಳ ಹಿಂದೆ ಬಣಗುತ್ತಿದ್ದ ಕೆಆರ್‌ಎಸ್ ಡ್ಯಾಂಗೆ ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಳೆದ 12 ಗಂಟೆಗಳ ಅವಧಿಯಲ್ಲಿ ಕೆಆರ್‌ಎಸ್ ಡ್ಯಾಂ 3 ಅಡಿ ಭರ್ತಿಯಾಗಿದ್ದು, ನೀರಿನ ಮಟ್ಟ 95 ಅಡಿಗೆ ಏರಿಕೆಯಾಗಿದೆ. ಅಲ್ಲದೇ ಕಳೆದ 12 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ನೀರು ಹರಿದು ಬಂದಿದ್ದು, 19.139 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ.

ಇನ್ನೂ ಡ್ಯಾಂನ ಒಳಹರಿವಿನ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡಿದೆ. ಸದ್ಯ ಡ್ಯಾಂಗೆ 29,552 ಕ್ಯೂಸೆಕ್ ನೀರು ಒಳಹರಿವಿದ್ದು, ಹೊರಹರಿವು 5,297 ಕ್ಯೂಸೆಕ್ ನಷ್ಟಿದೆ.

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 95.00 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 19.139 ಟಿಎಂಸಿ
ಒಳ ಹರಿವು – 29,552 ಕ್ಯೂಸೆಕ್
ಹೊರ ಹರಿವು – 5,297 ಕ್ಯೂಸೆಕ್

ಆಲಮಟ್ಟಿ ಜಲಾಶಯಷ

ಗರಿಷ್ಠ ಮಟ್ಟ- 123.081 ಟಿಎಂಸಿ
ಇಂದಿನ ಮಟ್ಟ – 62.534 ಟಿಎಂಸಿ
ಒಳ ಹರಿವು – 1,14,445 ಕ್ಯೂಸೆಕ್
ಹೊರ ಹರಿವು – 6,761 ಕ್ಯೂಸೆಕ್

ತುಂಗಭದ್ರಾ ಜಲಾಶಯ

ಗರಿಷ್ಠ ಮಟ್ಟ – 1,633 ಅಡಿಗಳು
ಇಂದಿನ ಮಟ್ಟ – 1,602.84 ಅಡಿಗಳು
ಗರಿಷ್ಠ ಟಿಎಂಸಿ – 105.788 ಟಿಎಂಸಿ
ಇಂದಿನ ಟಿಎಂಸಿ – 25.417 ಟಿಎಂಸಿ
ಒಳ ಹರಿವು – 47,294 ಕ್ಯೂಸೆಕ್
ಹೊರ ಹರಿವು – 213 ಕ್ಯೂಸೆಕ್