ಹಳಿಯಾಳ : ತಾಲ್ಲೂಕಿನ ತಟ್ಟಿಹಳ್ಳ ಜಲಾಶಯದಲ್ಲಿ ಸೋಮವಾರ ನೀರಿನ ಮಟ್ಟ 458.10 ಮೀ ಇದೆ ಎಂದು ಹಳಿಯಾಳ ತಾಲ್ಲೂಕಾಡಳಿತ ಮಾಹಿತಿ ನೀಡಿದೆ. 468.30 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ತಟ್ಟಿಹಳ್ಳ ಜಲಾಶಯದಲ್ಲಿ ಒಳ ಹರಿವು 12695 ಕ್ಯೂಸೆಕ್ ಇದೆ ಎಂದು ಮತ್ತು ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 58 ಮೀ.ಮೀ ಮಳೆಯಾಗಿದೆ ಎಂದು ಹಳಿಯಾಳ ತಾಲ್ಲೂಕಾಡಳಿತ ಮಾಹಿತಿ ನೀಡಿದೆ.