ಜೋಯಿಡಾ : ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ಇಂದು ಸೋಮವಾರ ನೀರಿನ ಮಟ್ಟ 538.00 ಮೀ ಇದೆ ಎಂದು ಜೋಯಿಡಾ ತಾಲ್ಲೂಕಾಡಳಿತ ಮಾಹಿತಿ ನೀಡಿದೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಸೂಪಾ ಜಲಾಶಯದಲ್ಲಿ ಒಳ ಹರಿವು 52,653 ಕ್ಯೂಸೆಕ್ ಇದೆ ಎಂದು ಮತ್ತು ಜಲಾನಯನ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 65.40 ಮೀ.ಮೀ ಮಳೆಯಾಗಿದೆ ಎಂದು ಜೋಯಿಡಾ ತಾಲ್ಲೂಕಾಡಳಿತ ಮಾಹಿತಿ ನೀಡಿದೆ.